ಶಿವಮೊಗ್ಗ, ಅ. 7: ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ಅಂಡರ್-14 ಮತ್ತು ಅಂಡರ್-17 ಜಿಲ್ಲಾಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ಡಿ.ವೈ.ಇ.ಎಸ್. (DYES) ಸ್ಪೋರ್ಟ್ಸ್ ಹಾಸ್ಟೆಲ್ನ ಕ್ರೀಡಾಪಟುಗಳು ಉತ್ತಮ ಸಾಧನೆ ಮಾಡಿ ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಗದಗದಲ್ಲಿ ನಡೆಯಲಿರುವ ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿಗೆ ಒಟ್ಟು 14 ಕ್ರೀಡಾಪಟುಗಳು ಅರ್ಹತೆ ಪಡೆದಿದ್ದಾರೆ. ಸ್ಪೋರ್ಟ್ಸ್ ಹಾಸ್ಟೆಲ್ನ ಬಾಲಕರು ಹಾಗೂ ಒಬ್ಬ ಬಾಲಕಿ ಫ್ರೀಸ್ಟೈಲ್ (F/S) ಮತ್ತು ಗ್ರೀಕೋ-ರೋಮನ್ (G/R) ವಿಭಾಗಗಳಲ್ಲಿ ಸ್ಪರ್ಧಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಅಂಡರ್-14 ಬಾಲಕರ ವಿಭಾಗ: 35 ಕೆ.ಜಿ.ಯಲ್ಲಿ ಕುಶಾಲ್, 38 ಕೆ.ಜಿ.ಯಲ್ಲಿ ಸಮರ್ಥ್, 41 ಕೆ.ಜಿ.ಯಲ್ಲಿ ಸತ್ಯಪ್ಪ, 44 ಕೆ.ಜಿ.ಯಲ್ಲಿ ಚಿರಾಂತ್, 52 ಕೆ.ಜಿ.ಯಲ್ಲಿ ಶಶಾಂಕ್, 57 ಕೆ.ಜಿ.ಯಲ್ಲಿ ಗುಡ್ಡದಯ್ಯ ಹಾಗೂ 68 ಕೆ.ಜಿ.ಯಲ್ಲಿ ಕಾರ್ತಿಕ್ ಎಂ. ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಅಂಡರ್-14 ಬಾಲಕಿಯರ ವಿಭಾಗ: 30 ಕೆ.ಜಿ.ಯಲ್ಲಿ ಆರಾಧ್ಯ ಎಸ್.ಎಚ್. ರಾಜ್ಯಮಟ್ಟದ ಸ್ಪರ್ಧೆಗೆ ಅರ್ಹತೆ ಪಡೆದಿದ್ದಾರೆ.
ಅಂಡರ್-17 ಫ್ರೀಸ್ಟೈಲ್ ವಿಭಾಗ: 45 ಕೆ.ಜಿ.ಯಲ್ಲಿ ಗುರು ಕೆರೂರ್ ಹಾಗೂ 55 ಕೆ.ಜಿ.ಯಲ್ಲಿ ಸುಹಾಸ್ ಎಂ.ಡಿ. ಆಯ್ಕೆಯಾಗಿದ್ದಾರೆ.
ಅಂಡರ್-17 ಗ್ರೀಕೋ-ರೋಮನ್ ವಿಭಾಗ: 45 ಕೆ.ಜಿ.ಯಲ್ಲಿ ಅನಿಲ್, 48 ಕೆ.ಜಿ.ಯಲ್ಲಿ ಮನೋಜ್ ಭಜಂತ್ರಿ, 51 ಕೆ.ಜಿ.ಯಲ್ಲಿ ಜಯಂತ್ ಟಿ. ಹಾಗೂ 60 ಕೆ.ಜಿ.ಯಲ್ಲಿ ಭುವನ್ ಕುಮಾರ್ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ರಾಜ್ಯಮಟ್ಟಕ್ಕೆ ಆಯ್ಕೆಯಾದ ಕ್ರೀಡಾಪಟುಗಳ ಸಾಧನೆಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ರೇಖ್ಯಾ ನಾಯ್ಕ್ ಅಭಿನಂದನೆ ಸಲ್ಲಿಸಿ, ರಾಜ್ಯಮಟ್ಟದ ಸ್ಪರ್ಧೆಗೆ ಶುಭ ಹಾರೈಸಿದ್ದಾರೆ. ತರಬೇತುದಾರರಾದ ರಾಜಪ್ಪ ಪಳಕೆ ಹಾಗೂ ಸಂಜಯ್ ಅವರು ಕ್ರೀಡಾಪಟುಗಳಿಗೆ ತರಬೇತಿ ಮತ್ತು ಮಾರ್ಗದರ್ಶನ ನೀಡಿದ್ದಾರೆ. ಕ್ರೀಡಾಂಗಣದ ಸಿಬ್ಬಂದಿ ವರ್ಗದವರು ಸಹ ಕ್ರೀಡಾಪಟುಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.











