ಮೂರು ಕ್ರೀಡಾಪಟುಗಳಿಗೆ ತೃತೀಯ ಸ್ಥಾನ
ಶಿವಮೊಗ್ಗ: ರಾಜ್ಯಮಟ್ಟದ ದಸರಾ ಸಿಎಂ ಕಪ್ ಕ್ರೀಡಾಕೂಟದ ಕುಸ್ತಿ ಸ್ಪರ್ಧೆಯಲ್ಲಿ ಶಿವಮೊಗ್ಗದ ಕ್ರೀಡಾಪಟುಗಳು ಉತ್ತಮ ಪ್ರದರ್ಶನ ನೀಡಿ ತೃತೀಯ ಸ್ಥಾನ ಗಳಿಸುವ ಮೂಲಕ ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದಾರೆ.
ಪುರುಷರ ಫ್ರೀಸ್ಟೈಲ್ ವಿಭಾಗದ 61 ಕೆಜಿ ತೂಕದ ವಿಭಾಗದಲ್ಲಿ ಕಾರ್ತಿಕ್ ಆರ್. ತೃತೀಯ ಸ್ಥಾನ ಪಡೆದಿದ್ದಾರೆ. ಪುರುಷರ ಗ್ರೆಕೊ-ರೋಮನ್ ವಿಭಾಗದ 67 ಕೆಜಿ ತೂಕದ ವಿಭಾಗದಲ್ಲಿ ರಂಗನಾಥ್ ಆರ್. ತೃತೀಯ ಸ್ಥಾನ ಗಳಿಸಿದ್ದಾರೆ.

ಮಹಿಳೆಯರ 53 ಕೆಜಿ ತೂಕದ ವಿಭಾಗದಲ್ಲಿ ಜಲಜಾಕ್ಷಿ ಎಸ್. ತೃತೀಯ ಸ್ಥಾನ ಪಡೆದು ಪದಕ ಗೆದ್ದಿದ್ದಾರೆ.
ಶಿವಮೊಗ್ಗದ ನೆಹರು ಕ್ರೀಡಾಂಗಣದಲ್ಲಿ ತರಬೇತಿ ಪಡೆಯುತ್ತಿದ್ದ ಈ ಕ್ರೀಡಾಪಟುಗಳ ಸಾಧನೆಗೆ ಕ್ರೀಡಾಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರೇಖ್ಯಾ ನಾಯ್ಕ್ ಅಭಿನಂದನೆ ಸಲ್ಲಿಸಿದ್ದು ಹಾಗೂ ತರಬೇತುದಾರರಾದ ರಾಜಪ್ಪ ಪಳಕೆ ಮತ್ತು ಸಂಜಯ್ ಅವರ ಮಾರ್ಗದರ್ಶನದಲ್ಲಿ ಕ್ರೀಡಾಪಟುಗಳು ಸಾಧನೆ ಮಾಡಿದ್ದಾರೆ.



