Home Shivamogga 13 ವರ್ಷಗಳ ಸೇವೆ, ಈಗ ಚುನಾವಣೆಯತ್ತ ಚಿತ್ತ; ಕೋಡೂರು ಕ್ಷೇತ್ರದಿಂದ ಲಿಂಗರಾಜು ಕಾಂಗ್ರೆಸ್ ಆಕಾಂಕ್ಷಿ..!!

13 ವರ್ಷಗಳ ಸೇವೆ, ಈಗ ಚುನಾವಣೆಯತ್ತ ಚಿತ್ತ; ಕೋಡೂರು ಕ್ಷೇತ್ರದಿಂದ ಲಿಂಗರಾಜು ಕಾಂಗ್ರೆಸ್ ಆಕಾಂಕ್ಷಿ..!!

26
0

13 ವರ್ಷಗಳ ಸಾರ್ವಜನಿಕ ಸೇವೆಯ ಅನುಭವ; ಕಾಂಗ್ರೆಸ್‌ ಟಿಕೆಟ್‌ ಮೇಲೆ ಯುವ ಮುಖಂಡನ ನಿರೀಕ್ಷೆ

ಹೊಸನಗರ: ಮುಂಬರುವ ತಾಲೂಕು ಪಂಚಾಯಿತಿ ಚುನಾವಣೆಯ ಹಿನ್ನೆಲೆಯಲ್ಲಿ ಹೊಸನಗರ ತಾಲೂಕಿನ ಕೋಡೂರು ಕ್ಷೇತ್ರದಿಂದ ಕಾಂಗ್ರೆಸ್‌ ಯುವ ಮುಖಂಡ ಸೋರೆಕೊಪ್ಪ ಲಿಂಗರಾಜು ಸ್ಪರ್ಧಿಸುವ ಆಕಾಂಕ್ಷೆ ವ್ಯಕ್ತಪಡಿಸಿದ್ದಾರೆ. ಪಕ್ಷದ ಟಿಕೆಟ್‌ಗಾಗಿ ನಿರೀಕ್ಷೆಯಲ್ಲಿರುವ ಅವರು, ಚುನಾವಣಾ ಕಣಕ್ಕಿಳಿಯುವ ಆಸಕ್ತಿ ವ್ಯಕ್ತಪಡಿಸಿರುವುದು ಸ್ಥಳೀಯ ರಾಜಕೀಯ ವಲಯದಲ್ಲಿ ಗಮನ ಸೆಳೆದಿದೆ.

ಸಾರ್ವಜನಿಕ ಸೇವೆಯಲ್ಲಿ 13 ವರ್ಷಗಳ ಅನುಭವ..!

ಕಳೆದ 13 ವರ್ಷಗಳಿಂದ ಸಾರ್ವಜನಿಕ ಸೇವೆ ಹಾಗೂ ಸಂಘಟನಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಸೋರೆಕೊಪ್ಪ ಲಿಂಗರಾಜು, ಕಾಂಗ್ರೆಸ್‌ ಪಕ್ಷದ ವಿವಿಧ ಕಾರ್ಯಕ್ರಮಗಳಲ್ಲಿಯೂ ಸಕ್ರಿಯವಾಗಿ ಭಾಗವಹಿಸುತ್ತಾ ಬಂದಿದ್ದಾರೆ. ಜನರೊಂದಿಗೆ ಸಂಪರ್ಕ ಹೊಂದುವ ಮೂಲಕ ಸಾರ್ವಜನಿಕ ಸೇವೆಯಲ್ಲಿ ತಮ್ಮದೇ ಆದ ಗುರುತು ಮೂಡಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ.

ಯುವ ನಾಯಕತ್ವಕ್ಕೆ ಅವಕಾಶದ ನಿರೀಕ್ಷೆ!

ಯುವಕರು ರಾಜಕೀಯದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು, ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರಬೇಕು ಎಂಬ ಆಶಯ ಹೊಂದಿರುವ ಲಿಂಗರಾಜು, ಕೋಡೂರು ಕ್ಷೇತ್ರದಿಂದ ಸ್ಪರ್ಧಿಸಲು ಸಿದ್ಧತೆ ನಡೆಸುತ್ತಿದ್ದಾರೆ.

ಕಾಂಗ್ರೆಸ್‌ ಪಕ್ಷವು ಈ ಬಾರಿ ಸ್ಪರ್ಧಿಸಲು ಅವಕಾಶ ನೀಡಲಿದೆ ಎಂಬ ನಿರೀಕ್ಷೆಯಲ್ಲಿರುವ ಅವರು, ಪಕ್ಷದ ಟಿಕೆಟ್‌ಗಾಗಿ ಎದುರು ನೋಡುತ್ತಿದ್ದಾರೆ. ಇದೀಗ ಕೋಡೂರು ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸುವ ಅವಕಾಶ ಲಭಿಸುತ್ತದೆಯೇ ಎಂಬುದು ಮುಂದಿನ ದಿನಗಳಲ್ಲಿ ಸ್ಪಷ್ಟವಾಗಬೇಕಿದೆ.