Home Shivamogga ಕುವೆಂಪು ವಿವಿ: ವಿಶ್ವ ಆಹಾರ ದಿನದ ಪ್ರಯುಕ್ತ ಜರುಗಿದ ಆಹಾರ ಮೇಳ..!!

ಕುವೆಂಪು ವಿವಿ: ವಿಶ್ವ ಆಹಾರ ದಿನದ ಪ್ರಯುಕ್ತ ಜರುಗಿದ ಆಹಾರ ಮೇಳ..!!

16
0

ಸರಳ ಆಹಾರವೇ ರುಚಿಕರ: ಪ್ರೊ. ಶರತ್ ಅನಂತಮೂರ್ತಿ..!!

ಶಿವಮೊಗ್ಗ (ಶಂಕರಘಟ್ಟ), ಅ. 17: ‘ಮೋಜಿನ ಆಹಾರ’ ಇರಲಿ, ‘ಗಂಭೀರ ಆಹಾರ’ ಇರಲಿ, ಮಾಕ್‌ಟೇಲ್ ಆಗಿರಲಿ ಅಥವಾ ಸರಳವಾದ ಸಲಾಡ್ ಆಗಿರಲಿ ಆಹಾರ ರುಚಿಕರವಾಗಿರುವುದರ ಜೊತೆಗೆ, ದೇಹಕ್ಕೆ ಅಗತ್ಯವಾದ ಎಲ್ಲ ಪೌಷ್ಟಿಕಾಂಶಗಳನ್ನೂ ಒದಗಿಸಬಲ್ಲದು. ಸರಳ ಆಹಾರವೇ ರುಚಿಕರ ಆಹಾರ ಎಂಬುದನ್ನು ಈ ಆಹಾರ ಮೇಳ ತೋರಿಸಿಕೊಟ್ಟಿತು ಎಂದು ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶರತ್ ಅನಂತಮೂರ್ತಿ ಹರ್ಷ ವ್ಯಕ್ತಪಡಸಿದರು.

ವಿಶ್ವ ಆರೋಗ್ಯ ದಿನದ ಪ್ರಯುಕ್ತ ವಿಶ್ವವಿದ್ಯಾಲಯದ ಆಹಾರ ತಂತ್ರಜ್ಞಾನ ವಿಭಾಗ ಶುಕ್ರವಾರ ಕುವೆಂಪು ವಿಶ್ವವಿದ್ಯಾನಿಲಯ ಜ್ಞಾನ ಸಹ್ಯಾದ್ರಿ ಆವರಣದಲ್ಲಿ ಆಯೋಜಿಸಿದ್ದ ಆಹಾರ ಮೇಳದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ವಿಭಾಗದ ವಿದ್ಯಾರ್ಥಿಗಳು ಪ್ರದರ್ಶಿಸಿದ ನವೀನ ಪ್ರಯೋಗಗಳು ನಿಜಕ್ಕೂ ಮೆಚ್ಚುವಂಥವು. ಆಹಾರ, ಆಹಾರ ಸೇವನೆ ಹಾಗೂ ಅದರ ಸುತ್ತಲಿನ ಎಲ್ಲ ಚಟುವಟಿಕೆಗಳು ಮನುಷ್ಯನ ಹೃದಯ ಮತ್ತು ಆತ್ಮವನ್ನು ತಲುಪುವ ದಾರಿಗಳಾಗಿವೆ ಎಂಬ ನಂಬಿಕೆಗೆ ಈ ಮೇಳ ಮತ್ತಷ್ಟು ಪುಷ್ಟಿ ನೀಡಿತು ಎಂದರು.

ಆಹಾರ ಮೇಳವನ್ನು ಎಸ್ತರ್ ಅನಂತಮೂರ್ತಿ ಅವರು ಉದ್ಘಾಟಿಸಿದ್ದು, ಸಸ್ಯಾಹಾರ, ಮಾಂಸಾಹಾರ, ಪ್ರೊ ಬಯಾಟಿಕ್, ಧವಸ ಧಾನ್ಯ ಆಧಾರಿತ ಏಳು ವಿವಿಧ ಆಹಾರ ಮಳಿಗೆಗಳನ್ನು ಆಹಾರ ತಂತ್ರಜ್ಞಾನದ ವಿದ್ಯಾರ್ಥಿಗಳು ಪ್ರಸ್ತುತಡಿಸಿದ್ದರು. ಇದೇ ಸಂದರ್ಭದಲ್ಲಿ ಶಿವಮೊಗ್ಗದ ಡಾ. ಬಿ. ಆರ್. ಅಂಬೇಡ್ಕರ್ ಸ್ವಯಂಪ್ರೇರಿತ ರಕ್ರದಾನ ಕೇಂದ್ರದ ಸಹಯೋಗದಲ್ಲಿ ರಕ್ತದಾನ ಶಿಬಿರವನ್ನು ಕೂಡ ಆಯೋಜಿಸಲಾಗಿತ್ತು.

ಆಹಾರ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಡಾ. ಪ್ರಶಾಂತ್ ಎಸ್ ಜೆ, ಡಾ. ಸಚಿನ್ ನಾಯಕ್, ಡಾ. ಮಾಧುರಿ, ಡಾ. ಅಜಿತ್, ಜಯಶೀಲಾ, ಡಾ. ಪ್ರೀಮಾ ಕಾರಲ್ ಎoಡ್ರಾಡೆ, ಇತರೆ ವಿಭಾಗಗಳ ಅಧ್ಯಾಪಕರುಗಳು ಹಾಗೂ ವಿದ್ಯಾರ್ಥಿಗಳು ಮೇಳದಲ್ಲಿ ಭಾಗವಹಿಸಿದ್ದರು.