Home Shivamogga Sagara ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ದೆಹಲಿ ವಿಮಾನ ಪ್ರವಾಸ..!!

ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ದೆಹಲಿ ವಿಮಾನ ಪ್ರವಾಸ..!!

69
0

✒️..ಅಮಿತ್ ಆರ್ ಆನಂದಪುರ

ಆನಂದಪುರ, ಏ.30:ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ಅತ್ಯುತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ವಿಶೇಷವಾಗಿ ಮೂರು ದಿನಗಳ ದೆಹಲಿ ಪ್ರವಾಸವನ್ನು ವಿಮಾನದ ಮೂಲಕ ಆಯೋಜಿಸಲಾಗಿದೆ ಎಂದು ಪ್ರಾಂಶುಪಾಲ ರವಿಶಂಕರ್ ತಿಳಿಸಿದ್ದಾರೆ.

ಇಂದು ಶಾಲೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಅಭಿನಂದಿಸಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಾಲೆಯ ಹಳೆಯ ವಿದ್ಯಾರ್ಥಿಯಾಗಿರುವ ಬೆಂಗಳೂರು ರೆಕ್ಯೂ ಸಂಸ್ಥೆಯ ಸಿಇಒ ಪ್ರಕಾಶ್ ರುಕ್ಮಯ್ಯ ಅವರು ವಿದ್ಯಾರ್ಥಿಗಳನ್ನು ಹುರಿದುಂಬಿಸಲು ವಿಮಾನ ಪ್ರಯಾಣ ಕೈಗೊಂಡಿರುವುದು ಹೆಮ್ಮೆಯ ಸಂಗತಿಯಾಗಿದೆ.

ಶಾಲೆಯ ಅಭಿವೃದ್ಧಿಗಾಗಿ ಅವರು ಈಗಾಗಲೇ ಎರಡು ಕೋಟಿಗೂ ಅಧಿಕ ಹಣವನ್ನು ವೆಚ್ಚ ಮಾಡಿದ್ದಾರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳಿಗೆ ಕೈಜೋಡಿಸುವ ವಿಶ್ವಾಸ ವ್ಯಕ್ತಪಡಿಸಿರುವುದು ಕುಷಿಯ ಸಂಗತಿಯಾಗಿದೆ ಎಂದರು.

ಈ ಶೈಕ್ಷಣಿಕ ವರ್ಷದಲ್ಲಿ ಎಂಟನೇ ತರಗತಿಯಿಂದ ದ್ವಿತೀಯ ಪಿಯುಸಿ ವರೆಗೆ ಅತ್ಯುತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಈ ಪ್ರವಾಸವನ್ನು ಹಮ್ಮಿಕೊಳ್ಳಲಾಗಿದೆ. ದ್ವಿತೀಯ ಪಿಯುಸಿಯಲ್ಲಿ ಕೌಶಿಕ್ ವಿ (569), ಪ್ರಥಮ ಪಿಯುಸಿಯಲ್ಲಿ ಹರ್ಷಿತ ಆರ್ (559), ಎಸ್‌ಎಸ್‌ಎಲ್‌ಸಿ‌ನಲ್ಲಿ ಚಂದನ ಕೆ.ಜಿ (586) ಮತ್ತು ಪ್ರೀತಿ ಎಸ್.ಪಿ (583), 9ನೇ ತರಗತಿಯಲ್ಲಿ ದೀಪಿಕಾ ಸಿ.ಎಸ್ (606) ಹಾಗೂ 8ನೇ ತರಗತಿಯಲ್ಲಿ ಆಯುಷ್ ಅವರು ಹೆಚ್ಚಿನ ಅಂಕ ಗಳಿಸಿ ಪ್ರವಾಸಕ್ಕೆ ಆಯ್ಕೆಯಾಗಿದ್ದಾರೆ ಎಂದರು.

ಉಪ ಪ್ರಾಂಶುಪಾಲ ಈಶ್ವರಪ್ಪ ಮಾತನಾಡಿ, ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಇಂತಹ ವಿಮಾನ ಪ್ರವಾಸವನ್ನು ಏರ್ಪಡಿಸಿರುವುದು ಬಹಳ ಖುಷಿಯ ಸಂಗತಿಯಾಗಿದೆ,ನಮ್ಮ ಶಾಲೆಯಲ್ಲಿ ನುರಿತ ಶಿಕ್ಷಕರಿಂದ ಉತ್ತಮ ಶಿಕ್ಷಣ ನೀಡಲಾಗುತ್ತಿದ್ದು, ಈಗಾಗಲೇ ಪ್ರವೇಶಾತಿ ಪ್ರಾರಂಭವಾಗಿದೆ ಎಂದು ತಿಳಿಸಿದರು.

ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರಾದ ಜಗನ್ನಾಥ್ ಮತ್ತು ಉಮೇಶ್ ಎನ್ ಮಾತನಾಡಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಸಮಿತಿಯ ಸದಸ್ಯರಾದ ಬಿ.ಡಿ. ರವಿಕುಮಾರ್, ದೇವು, ಜಗದೀಶ್, ಚಂದ್ರಶೇಖರ್ ಮತ್ತು ಪೋಷಕರು ಹಾಗೂ ಬೋಧಕ-ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.

ಆನಂದಪುರ, ಏ.30:ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ಅತ್ಯುತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ವಿಶೇಷವಾಗಿ ಮೂರು ದಿನಗಳ ದೆಹಲಿ ಪ್ರವಾಸವನ್ನು ವಿಮಾನದ ಮೂಲಕ ಆಯೋಜಿಸಲಾಗಿದೆ ಎಂದು ಪ್ರಾಂಶುಪಾಲ ರವಿಶಂಕರ್ ತಿಳಿಸಿದ್ದಾರೆ.

ಇಂದು ಶಾಲೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಅಭಿನಂದಿಸಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಾಲೆಯ ಹಳೆಯ ವಿದ್ಯಾರ್ಥಿಯಾಗಿರುವ ಬೆಂಗಳೂರು ರೆಕ್ಯೂ ಸಂಸ್ಥೆಯ ಸಿಇಒ ಪ್ರಕಾಶ್ ರುಕ್ಮಯ್ಯ ಅವರು ವಿದ್ಯಾರ್ಥಿಗಳನ್ನು ಹುರಿದುಂಬಿಸಲು ವಿಮಾನ ಪ್ರಯಾಣ ಕೈಗೊಂಡಿರುವುದು ಹೆಮ್ಮೆಯ ಸಂಗತಿಯಾಗಿದೆ.

ಶಾಲೆಯ ಅಭಿವೃದ್ಧಿಗಾಗಿ ಅವರು ಈಗಾಗಲೇ ಎರಡು ಕೋಟಿಗೂ ಅಧಿಕ ಹಣವನ್ನು ವೆಚ್ಚ ಮಾಡಿದ್ದಾರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳಿಗೆ ಕೈಜೋಡಿಸುವ ವಿಶ್ವಾಸ ವ್ಯಕ್ತಪಡಿಸಿರುವುದು ಕುಷಿಯ ಸಂಗತಿಯಾಗಿದೆ ಎಂದರು.

ಈ ಶೈಕ್ಷಣಿಕ ವರ್ಷದಲ್ಲಿ ಎಂಟನೇ ತರಗತಿಯಿಂದ ದ್ವಿತೀಯ ಪಿಯುಸಿ ವರೆಗೆ ಅತ್ಯುತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಈ ಪ್ರವಾಸವನ್ನು ಹಮ್ಮಿಕೊಳ್ಳಲಾಗಿದೆ. ದ್ವಿತೀಯ ಪಿಯುಸಿಯ ಕೌಶಿಕ್ ವಿ ದಾಸಕೊಪ್ಪದ ವಿಜಯ್ ಕುಮಾರ್ ಮತ್ತು ಭಾರತಿ ಪುತ್ರ (569), ಪ್ರಥಮ ಪಿಯುಸಿಯಲ್ಲಿ ಹರ್ಷಿತ ಆರ್ ತುಪ್ಪೂರು ಮೂಲದ ಸರೋಜ ಮತ್ತು ಶಿವಪ್ಪ ಅವರ ಪುತ್ರಿ (559), ಎಸ್‌ಎಸ್‌ಎಲ್‌ಸಿ‌ನಲ್ಲಿ ಚಂದನ ಕೆ.ಜಿ ಇರುವಕ್ಕಿಯ ಕಲ್ಲು ಕೊಪ್ಪದ ಗಣೇಶ್ ಮತ್ತು ರೇಷ್ಮಾ ಪುತ್ರಿ (586) ಮತ್ತು ಪ್ರೀತಿ ಎಸ್.ಪಿ ಮುಂಬಾಳಿನ ಶೇಖರಪ್ಪ ಹಾಗೂ ಸವಿತಾಳ ರವರ ಪುತ್ರಿ (583), 9ನೇ ತರಗತಿಯ ಮುಂಬಾಳಿನ ಚಂದ್ರ ನಾಯ್ಕ್ , ಭಾರತಿ ಪುತ್ರಿ ದೀಪಿಕಾ ಸಿ.ಎಸ್ ( 606) ಹಾಗೂ 8ನೇ ತರಗತಿಯ ಆಯುಷ್ ಮುಂಬಾಳಿನ ಗಣೇಶ್ ಅವರ ಪುತ್ರ ಹೆಚ್ಚಿನ ಅಂಕ ಗಳಿಸಿ ಪ್ರವಾಸಕ್ಕೆ ಆಯ್ಕೆಯಾಗಿದ್ದಾರೆ ಎಂದರು.

ಉಪ ಪ್ರಾಂಶುಪಾಲ ಈಶ್ವರಪ್ಪ ಮಾತನಾಡಿ, ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಇಂತಹ ವಿಮಾನ ಪ್ರವಾಸವನ್ನು ಏರ್ಪಡಿಸಿರುವುದು ಬಹಳ ಖುಷಿಯ ಸಂಗತಿಯಾಗಿದೆ,ನಮ್ಮ ಶಾಲೆಯಲ್ಲಿ ನುರಿತ ಶಿಕ್ಷಕರಿಂದ ಉತ್ತಮ ಶಿಕ್ಷಣ ನೀಡಲಾಗುತ್ತಿದ್ದು, ಈಗಾಗಲೇ ಪ್ರವೇಶಾತಿ ಪ್ರಾರಂಭವಾಗಿದೆ ಎಂದು ತಿಳಿಸಿದರು.

ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರಾದ ಜಗನ್ನಾಥ್ ಮತ್ತು ಉಮೇಶ್ ಎನ್ ಮಾತನಾಡಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.ಈ ಸಂದರ್ಭದಲ್ಲಿ ಸಮಿತಿಯ ಸದಸ್ಯರಾದ ಬಿ.ಡಿ. ರವಿಕುಮಾರ್, ದೇವು, ಜಗದೀಶ್, ಚಂದ್ರಶೇಖರ್ ಮತ್ತು ಪೋಷಕರು ಹಾಗೂ ಬೋಧಕ-ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.