Home Shivamogga ಐಪಿಎಸ್‌ ಬೆನಕ ಪ್ರಸಾದ್‌ ವರ್ಗಾವಣೆ ಆದೇಶ ರದ್ದು..!!

ಐಪಿಎಸ್‌ ಬೆನಕ ಪ್ರಸಾದ್‌ ವರ್ಗಾವಣೆ ಆದೇಶ ರದ್ದು..!!

25
0

✒️..ಅಮಿತ್ ಆರ್ ಆನಂದಪುರ

ಬೆಂಗಳೂರು: ಶಿವಮೊಗ್ಗ (ಎ) ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕರಾಗಿ (ಎಎಸ್‌ಪಿ) ವರ್ಗಾವಣೆಗೊಂಡಿದ್ದ ಐಪಿಎಸ್ ಅಧಿಕಾರಿ ಡಾ. ಬೆನಕ ಪ್ರಸಾದ್ ಎನ್.ಜೆ. ಅವರ ವರ್ಗಾವಣೆ ಆದೇಶವನ್ನು ಸರ್ಕಾರ ರದ್ದುಗೊಳಿಸಿದೆ.

​ಮೇ 21ರಂದು ಹೊರಡಿಸಲಾಗಿದ್ದ ವರ್ಗಾವಣೆ ಆದೇಶವನ್ನು ರದ್ದುಪಡಿಸಲಾಗಿದ್ದು, 2022ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿರುವ ಡಾ. ಬೆನಕ ಪ್ರಸಾದ್ ಅವರು ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಶಿವಮೊಗ್ಗ ಜಿಲ್ಲೆಯ ಸಾಗರ ಉಪವಿಭಾಗದ ಎಎಸ್‌ಪಿ ಹುದ್ದೆಯಲ್ಲೇ ಮುಂದುವರಿಯಲಿದ್ದಾರೆ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್) ಪ್ರಕಟಣೆಯಲ್ಲಿ ತಿಳಿಸಿದೆ.

ಶೀಲವಂತ ಹೊಸಮನಿ ಶಿವಮೊಗ್ಗಕ್ಕೆ:

ಇದೇ ವೇಳೆ ಬಳ್ಳಾರಿಯ ಸಿಸಿಪಿಎಸ್‌ಗೆ ವರ್ಗಾವಣೆಗೊಂಡಿದ್ದ ಡಿವೈಎಸ್ಪಿ (ಸಿವಿಲ್) ಶೀಲವಂತ ಹೊಸಮನಿ ಅವರ ಆದೇಶವನ್ನು ಮಾರ್ಪಡಿಸಲಾಗಿದೆ. ಹೊಸ ಆದೇಶದನ್ವಯ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಶಿವಮೊಗ್ಗ ಉಪವಿಭಾಗ–1ರ ಉಪ ಪೊಲೀಸ್ ಅಧೀಕ್ಷಕರನ್ನಾಗಿ (ಡಿವೈಎಸ್ಪಿ) ನೇಮಕ ಮಾಡಲಾಗಿದೆ.

​ರಾಜ್ಯಪಾಲರ ಆದೇಶದ ಮೇರೆಗೆ ಡಿಪಿಎಆರ್ ಅಧೀನ ಕಾರ್ಯದರ್ಶಿ ಸಂಜಯ್ ಬಿ.ಎಸ್. ಈ ಕುರಿತು ಅಧಿಕೃತ ಅಧಿಸೂಚನೆ ಹೊರಡಿಸಿದ್ದಾರೆ.