ಮನೆ Blog ಕೆಎಫ್‌ಡಿ ಸೋಂಕಿಗೆ ಒಳಗಾಗಿ ಸಾಗರ ತಾಲೂಕಿನ ಓರ್ವ ವ್ಯಕ್ತಿ ಸಾವು…!!

ಕೆಎಫ್‌ಡಿ ಸೋಂಕಿಗೆ ಒಳಗಾಗಿ ಸಾಗರ ತಾಲೂಕಿನ ಓರ್ವ ವ್ಯಕ್ತಿ ಸಾವು…!!

80
0

✒️…ಅಮಿತ್ ಆರ್ ಆನಂದಪುರ

ಶಿವಮೊಗ್ಗ: ಜಿಲ್ಲೆಯ ಸಾಗರ ತಾಲ್ಲೂಕಿನಲ್ಲಿ ಕೆಎಫ್‌ ಡಿ ಸೋಂಕಿಗೆ ಒಳಗಾಗಿ ವ್ಯಕ್ತಿ ಚಿಕಿಸ್ಥೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.ಇದರೊಂದಿಗೆ ಜಿಲ್ಲೆಯಲ್ಲಿ ಈ ವರ್ಷ ಕೆಎಫ್‌ ಡಿ ಮಾರಕ ಕಾಯಿಲೆಗೆ ಒಳಗಾಗಿ ನಾಲ್ಕನೇ ಸಾವು ಇದಾಗಿದೆ.

ಸಾಗರ ತಾಲೂಕು ಮಂಜಿನಕಾನು -ಹೀರೆಮನೆಯ ಮಂಜಪ್ಪ( 72) ಮೃತ ದುರ್ದೈವಿ.

ಏ.4ರಂದು ವಾಂತಿ-ಬೇದಿಯಿಂದ ಅಸ್ವಸ್ಥರಾಗಿದ್ದ ಮಂಜಪ್ಪ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪರೀಕ್ಷೆಯಲ್ಲಿ ಕೆ.ಎಫ್‌.ಡಿ ಸೋಂಕು ದೃಢಪಟ್ಟ ಕಾರಣ ತಕ್ಷಣವೇ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಂಜಪ್ಪ ಅವರು ಈ ಕಾಯಿಲೆಯ ಜೊತೆಗೆ ಇತರ ಆರೋಗ್ಯ ಸಮಸ್ಯೆಗಳಿಂದಲೂ ಬಳಲುತ್ತಿದ್ದುದರಿಂದ ಚಿಕಿತ್ಸೆ ಫಲಿಸದೇ (ಏ.8) ಬುದವಾರ ಉಡುಪಿಯ ಮಣಿಪಾಲ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

2026ರ ಸಾಲಿನಲ್ಲಿ 85 ಕೆಎಫ್ ಡಿ ಪಾಸಿಟಿವ್ ಪ್ರಕರಣ ದೃಢಪಟ್ಟಿದ್ದು, ಸದ್ಯ ಸಕ್ರಿಯ ಸೋಂಕಿತರಿರುವ 11 ಜನರಿಗೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕು ಹರಡದಂತೆ ತಡೆಯಲು ಮತ್ತು ಸಕ್ರಿಯ ಕೇಸ್‌ಗಳ ಮೇಲೆ ನಿಗಾ ಇಡಲು ಆರೋಗ್ಯ ಇಲಾಖೆಯ ಅಧಿಕಾರಿಗಳು ಗ್ರಾಮ ಮಟ್ಟದಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ.