ಮನೆ ಶಿವಮೊಗ್ಗ ಜಾಗತಿಕ ತಾಪಮಾನ ಕುರಿತು ಕವಿತೆಗಳ ಆಹ್ವಾನ..!!

ಜಾಗತಿಕ ತಾಪಮಾನ ಕುರಿತು ಕವಿತೆಗಳ ಆಹ್ವಾನ..!!

15
0

✒️..ಅಮಿತ್ ಆರ್ ಆನಂದಪುರ

ಶಿವಮೊಗ್ಗ: ಜಾಗತಿಕ ತಾಪಮಾನದಲ್ಲಿ ಗಣನೀಯ ಹೆಚ್ಚಳ- ಇದು ಇಡೀ ಜಗತ್ತನ್ನೇ ಕಾಡುತ್ತಿರುವ ಅತೀ ದೊಡ್ಡ ಆತಂಕ. ಈ ತಾಪಮಾನದ ನಿರಂತರ ಹೆಚ್ಚಳದಿಂದಾಗಿ, ಸಮುದ್ರ ಮಟ್ಟದಲ್ಲಿ ಏರಿಕೆ, ಜೀವ ವೈವಿಧ್ಯತೆ ನಾಶ, ಪ್ರಕೃತಿ ವಿಕೋಪ, ಅಕಾಲಿಕ ಮಳೆ-ಹಾನಿ ಇತ್ಯಾದಿಗಳು ಸಂಭವಿಸುತ್ತಿವೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಜಗತ್ತಿನಾದ್ಯಂತ ಹಲವಾರು ವೈವಿಧ್ಯಮಯ ಕಾರ್ಯಕ್ರಮಗಳು ನಡೆಯುತ್ತಿವೆ.

ಈ ಸಂದರ್ಭದಲ್ಲಿ, ರೇಡಿಯೋ ಶಿವಮೊಗ್ಗ 90.8ಎಫ್.ಎಂ. ಬಾನುಲಿ ಕೇಂದ್ರವು, ಜಾಗತಿಕ ತಾಪಮಾನ ಕುರಿತು ಕವಿಗೋಷ್ಠಿ ಆಯೋಜನೆ ಮಾಡಿದೆ. ಶಿವಮೊಗ್ಗದ ಪ್ರಜ್ಞಾ ಬುಕ್ ಹೌಸ್ ಮತ್ತು ಪರಿಸರ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ನಡೆಯಲಿರುವ ಈ ಕವಿಗೋಷ್ಠಿಯಲ್ಲಿ ಕನ್ನಡ ಬಲ್ಲ ಯಾರು ಬೇಕಾದರೂ ಪಾಲ್ಗೊಳ್ಳಬಹುದು. ಕವಿತೆಗಳನ್ನು ಅಕ್ಷರ ರೂಪದಲ್ಲಿ ಅಥವಾ ಪಿಡಿಎಫ್ ರೂಪದಲ್ಲಿ ಇದೇ ತಿಂಗಳ 20ರ ಒಳಗಾಗಿ radioshivamogga@gmail.com ಈ ಮೇಲ್ ವಿಳಾಸಕ್ಕೆ ಕಳಿಸಲು ಕೋರಲಾಗಿದೆ.

ಆಯ್ಕೆಯಾದ ಕವಿತೆಗಳನ್ನು ರೇಡಿಯೋ ಶಿವಮೊಗ್ಗ 90.8 ಎಫ್.ಎಂ ಬಾನುಲಿ ಕೇಂದ್ರದಲ್ಲಿ ವಾಚನ ಮಾಡಲು ಅವಕಾಶ ನೀಡಲಾಗುವುದು, ಹಾಗೂ ಪ್ರಜ್ಞಾ ಬುಕ್ ಹೌಸ್ ವತಿಯಿಂದ ಆಕರ್ಷಕ ಪುಸ್ತಕಗಳ ಬಹುಮಾನ ಕೂಡ ದೊರಕಲಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9448138183, 7259176279