ಮನೆ ಶಿವಮೊಗ್ಗ ಶರಾವತಿ ಎಡದಂಡೆಯ ದ್ವೀಪದ ತುಮರಿ ಕಾಲೇಜಿಗೆ ಶೇ 89 ಫಲಿತಾಂಶ..!!

ಶರಾವತಿ ಎಡದಂಡೆಯ ದ್ವೀಪದ ತುಮರಿ ಕಾಲೇಜಿಗೆ ಶೇ 89 ಫಲಿತಾಂಶ..!!

16
0

ಸಾಗರ:2025-26ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶರಾವತಿ ಎಡದಂಡೆಯ ತುಮರಿ ಸರ್ಕಾರಿ ಪದವಿ ಪೂರ್ವ ಕಾಲೇಜು ಶೇ 89.00% ಫಲಿತಾಂಶ ಪಡೆದಿದೆ.

ಪರಿಕ್ಷೆಯಲ್ಲಿ ಒಟ್ಟು 35ವಿದ್ಯಾರ್ಥಿಗಳು ಹಾಜರಾಗಿದ್ದು, ಇದರಲ್ಲಿ 31 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಕಲಾ ವಿಭಾಗದಲ್ಲಿ ನವ್ಯಾ (546) ರಂಜಿತಾ ಡಿ (540) ಸಾನಿಕ ಕೆ ಎಲ್ (538) ಸಿಂಚನಾ (523)

ವಾಣಿಜ್ಯ ವಿಭಾಗದಲ್ಲಿ ಛಾಯಾ (575) ಭಾಗ್ಯ ಬಿ(528) ಕಿರಣ್ ಕುಮಾರ್ (522) ಸಂಜನಾ ಎಸ್ (513) ಅಂಕ ಪಡೆದು ಅತ್ಯುನ್ನತ ಸ್ಥಾನ ಪಡೆದಿದ್ದಾರೆ.

8ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ. 18ವಿದ್ಯಾರ್ಥಿಗಳು ಪ್ರಥಮ ಶ್ರೇಣಿ, 3ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿ, ಇಬ್ಬರು ವಿದ್ಯಾರ್ಥಿಗಳು ತೃತೀಯ ಸ್ಥಾನದಲ್ಲಿ ತೇರ್ಗಡೆ ಹೊಂದಿದ್ದಾರೆ.

ಕಲಾ ವಿಭಾಗಕ್ಕೆ ಶೇ 79 ಫಲಿತಾಂಶ ಬಂದಿದೆ. ವಾಣಿಜ್ಯ ವಿಭಾಗಕ್ಕೆ ಶೇ 100 ಫಲಿತಾಂಶ ಬಂದಿದೆ. ಕುಗ್ರಾಮದಿಂದ ತೆರಳಿ ಉತ್ತಮ ಫಲಿತಾಂಶ ಪಡೆದ ವಿದ್ಯಾರ್ಥಿಗಳಿಗೆ, ಫಲಿತಾಂಶಕ್ಕೆ ಕಾರಣರಾದ ಕಾಲೇಜು ಉಪನ್ಯಾಸಕರಿಗೆ ಕಾಲೇಜು ಅಭಿವೃದ್ಧಿ ಸಮಿತಿ ಅಭಿನಂದನೆ ಸಲ್ಲಿಸಿದೆ.

ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ:https://chat.whatsapp.com/CnYYumPSez6AMYyw8cHG9A?mode=ac_t