Home Blog ಪಕ್ಷ ಬದಲಿಸಿದ ಬಡವನ 15 ಗುಂಟೆ ಜಮೀನು ತೆರವಿಗೆ ಅರಣ್ಯಾಧಿಕಾರಿಗೆ ಶಾಸಕರ ಕುಮ್ಮಕ್ಕು: ರತ್ನಾಕರ ಹೊನಗೋಡು...

ಪಕ್ಷ ಬದಲಿಸಿದ ಬಡವನ 15 ಗುಂಟೆ ಜಮೀನು ತೆರವಿಗೆ ಅರಣ್ಯಾಧಿಕಾರಿಗೆ ಶಾಸಕರ ಕುಮ್ಮಕ್ಕು: ರತ್ನಾಕರ ಹೊನಗೋಡು ಆಕ್ರೋಶ..!!

13
0
filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: video;hw-remosaic: false;touch: (-1.0, -1.0);sceneMode: 0;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 47;

✒️..ಅಮಿತ್ ಆರ್ ಆನಂದಪುರ

ಆನಂದಪುರ/ಕಾಂಗ್ರೆಸ್ಸಿನಲ್ಲಿದ್ದ ಬಡವ ಈಗ ಬಿಜೆಪಿಗೆ ಹೋದನೆಂದು ಶಾಸಕರು ಕುಮ್ಮಕ್ಕಿನಿಂದ ಅರಣ್ಯ ಇಲಾಖೆಯವರ ಮೂಲಕ 15 ಗುಂಟೆ ಜಮೀನನ್ನು ತೆರವುಗೊಳಿಸಲು ಹೋಗಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ರತ್ನಾಕರ ಹೊನಗೋಡು ಕಿಡಿಕಾರಿದರು.

ಅವರು ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ಸಾಗರ ತಾಲೂಕಿನ ಅಡ್ಡೇರಿಯಲ್ಲಿ ಅನಿಲ್ ಎಂಬಾತ ಸಾಲ ಮಾಡಿ ಬಡವ 25 ರಿಂದ 30 ವರ್ಷಗಳಿಂದ 15 ಗುಂಟೆ ಜಮೀನನ್ನು ಸಾಗುವಳಿ ಮಾಡಿಕೊಂಡು, ಅದರಲ್ಲಿ 10 ಗುಂಟೆಗೆ ಅಡಿಕೆ ಮತ್ತು 5 ಕುಂಟೆಗೆ ಕಬ್ಬು ಹಾಕಿ ಜೀವನ ನಡೆಸಿಕೊಂಡು ಹೋಗುತ್ತಿದ್ದ. ಆದರೆ ಅವನು ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ಸಿನಿಂದ ಬಿಜೆಪಿಗೆ ಬಂದನೆಂದು ಅವನ ಮೇಲೆ ಶಾಸಕ ಗೋಪಾಲಕೃಷ್ಣ ಬೇಳೂರು ಅರಣ್ಯ ಅಧಿಕಾರಿಗಳಿಗೆ ಕುಮ್ಮಕ್ಕು ನೀಡಿ ಅದನ್ನು ತೆರವುಗೊಳಿಸಲು ಹೋಗಿದ್ದಾರೆ. ಇವರಿಗೆ ಮಾನವೀಯತೆ ಇಲ್ಲವೇ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದರ ವಿರುದ್ಧವಾಗಿ ಸಾಗರ ಡಿಎಫ್ಓ ಕಚೇರಿ ಮುಂಭಾಗ ಪಕ್ಷದ ಮುಖಂಡರೊಂದಿಗೆ ಸೇರಿ ಹೋರಾಟ ಮಾಡಿದ್ದೆವು. ನಂತರ ನಮ್ಮ ಹೋರಾಟಕ್ಕೆ ಮಣಿದು ಡಿಎಫ್ಓ ಸ್ಥಳಕ್ಕೆ ಎಸಿಎಫ್ ಅನ್ನು ಕಳುಹಿಸಿ ಸ್ಥಳ ಪರಿಶೀಲನೆ ಮಾಡಿ, ಏಕೆ ತೆರವುಗೊಳಿಸಿದ್ದಾರೆ ಎಂದು ತಿಳಿದುಕೊಂಡು, ಒಂದು ವೇಳೆ ಸರಿಯಾದ ಉತ್ತರ ಅರಣ್ಯಾಧಿಕಾರಿಗಳಿಂದ ದೊರೆಯದಿದ್ದರೆ ಅವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದರು.

ಆದರೆ ಮತ್ತೆ ಸ್ಥಳಕ್ಕೆ ಭೇಟಿ ನೀಡಿ ಹೆದರಿಸಿ 15 ಗುಂಟೆ ಜಮೀನನ್ನು ಜೆಸಿಬಿ ಮೂಲಕ ತೆರವುಗೊಳಿಸಲಾಗುವುದು ಎಂದು ಬಡವನಿಗೆ ಭಯ ಹುಟ್ಟಿಸಿದ್ದಾರೆ.

ಅರಣ್ಯ ಇಲಾಖೆ ಆ ಬಡವನ ಮೇಲೆ ಯಾಕೆ ಇಷ್ಟು ದರ್ಪ ತೋರುತ್ತಿದೆ ಎಂದು ಕಿಡಿಕಾರಿದರು.
ಇದರಿಂದ ಏನಾದರೂ ಆ ಬಡವ ಆತ್ಮಹತ್ಯೆ ಮಾಡಿಕೊಂಡರೆ ಇದಕ್ಕೆ ನೇರ ಹೊಣೆ ಅರಣ್ಯ ಇಲಾಖೆಯವರೇ ಆಗಿರುತ್ತಾರೆ ಎಂದು ಆರೋಪಿಸಿದರು.

ರಾಜ್ಯ ಮತ್ತು ಕೇಂದ್ರ ಸರ್ಕಾರ ಮೂರು ಎಕರೆ ಒಳಗಿನ ಯಾವ ಸಾಗುವಳಿದಾರರಿಗೂ ಸಹ ತೊಂದರೆ ನೀಡಬಾರದು ಎಂದು ತಿಳಿಸಿದೆ. ಆದರೆ 15 ಗುಂಟೆ ಜಮೀನನ್ನು ತೆರವುಗೊಳಿಸಲು ಹೋಗಿದ್ದಾರಲ್ಲ, ಇಂಥವರಿಗೆ ಶಾಸಕರ ಕೈಯಿಂದಲೇ ರಾಷ್ಟ್ರ ಪ್ರಶಸ್ತಿ ನೀಡಬೇಕು ಎಂದು ದೂರಿದರು.

ಮುಂದಿನ ದಿನಗಳಲ್ಲಿ ಹೀಗೆ ಮುಂದುವರೆದರೆ ಸಂಸದ ಬಿ.ವೈ. ರಾಘವೇಂದ್ರ ಹಾಗೂ ಹಾಲಪ್ಪ ಹರತಾಳು ನೇತೃತ್ವದಲ್ಲಿ ನಮ್ಮ ಜಿಲ್ಲೆಯ ಪಕ್ಷದ ನಾಯಕರೆಲ್ಲರೂ ಸೇರಿ ಹೋರಾಟದ ಮೂಲಕ ಉತ್ತರಿಸುತ್ತೇವೆ ಎಂದು ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮ್ಯಾಮ್ ಕೋರ್ಸ್ ನಿರ್ದೇಶಕರಾದ ಭರ್ಮಪ್ಪ ಅಂದಾಸೂರು, ಮುಖಂಡರಾದ ಧನರಾಜ್, ಕೃಷ್ಣಮೂರ್ತಿ, ಶಿವಣ್ಣ, ರವಿ ,ಬೂದ್ಯಪ್ಪ ಉಪಸ್ಥಿತರಿದ್ದರು.