ಮನೆ ಶಿವಮೊಗ್ಗ ಮಣ್ಣು ಕುಸಿದು ಹುಲಿಕಲ್ ಘಾಟಿಯಲ್ಲಿ ಮೂರು ಕಾರ್ಮಿಕರು ಸಾವು..!!

ಮಣ್ಣು ಕುಸಿದು ಹುಲಿಕಲ್ ಘಾಟಿಯಲ್ಲಿ ಮೂರು ಕಾರ್ಮಿಕರು ಸಾವು..!!

52
0

✒️..ಅಮಿತ್ ಆರ್ ಆನಂದಪುರ

ಶಿವಮೊಗ್ಗ: ಹೊಸನಗರದ ಹುಲಿಕಲ್‌ ಘಾಟಿ ಹೇರ್‌ಪಿನ್ ತಿರುವು ಶಾಶ್ವತ ಬೃಹತ್ ತಡೆಗೋಡೆ ನಿರ್ಮಾಣ ಕಾಮಗಾರಿ ವೇಳೆ ಮಣ್ಣು ಕುಸಿದು ಮೂವರು ಸ್ಥಳದಲ್ಲೇ ಮೃತಪಟ್ಟ ದುರ್ಘಟನೆ ಗುರುವಾರ ಸಂಜೆ ನಡೆದಿದೆ.

‘ನಾಲ್ವರಿಗೆ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.ಮೃತದೇಹ ಹೊರತೆಗೆಯಲು ಎಸ್‌ಡಿಆರ್‌ಎಫ್ ತಂಡ ಮಂಗಳೂರಿನಿಂದ ಹೊರಟಿದೆ ಎಂದು ತಿಳಿದು ಬಂದಿದೆ.

ಮೃತರನ್ನು ನಗರ ಸಮೀಪದ ಚಕ್ಕಾರು ಗ್ರಾಮದ ರಾಘು,ಹಾವೇರಿ ಜಿಲ್ಲೆಯ ನೆಲಗಲ್ಲು ಗ್ರಾಮದ ಶಬೀರ್, ರಾಜು ಎಂದು ಗುರುತಿಸಲಾಗಿದೆ.

ಹುಲಿಕಲ್ ಘಾಟಿ ( ಬಾಳೆಬರೆ ಘಾಟ್, ರಾಜ್ಯ ಹೆದ್ದಾರಿ 52) ಹೇರ್ ಪಿನ್ ತಿರುವಿನಲ್ಲಿ ಈ ಹಿಂದೆ ಭೂ ಕುಸಿತ ಸಂಭವಿಸಿತ್ತು. ಈ ಹಿನ್ನೆಲೆಯಲ್ಲಿ ಶಾಶ್ವತ ಬೃಹತ್ ತಡೆಗೋಡೆ ನಿರ್ಮಾಣ ಕಾಮಗಾರಿ ನಡೆಯುತ್ತಿತ್ತು.ಈ ವೇಳೆ ಕಾರ್ಮಿಕರ ಮೇಲೆ ಮಣ್ಣು ಜಾರಿದೆ. ಸ್ಥಳದಲ್ಲೇ ಮೂವರು ಸಾವನ್ನಪ್ಪಿದ್ದಾರೆ. ನಾಲ್ವರು ಕಾರ್ಮಿಕರು ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ನಗರ ಠಾಣೆ ಪೊಲೀಸರು ಹಾಗೂ ಅಗ್ನಿಶಾಮಕ ದಳದವರು ಕಾರ್ಯಾಚರಣೆ ನಡೆಸುತ್ತಿದ್ದಾರೆ.

ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ:https://chat.whatsapp.com/CnYYumPSez6AMYyw8cHG9A?mode=ac_t