ಮನೆ Blog ದ್ವಿತೀಯ ಪಿಯುಸಿ ಫಲಿತಾಂಶ: ಆನಂದಪುರ ಸರ್ಕಾರಿ ಕಾಲೇಜಿಗೆ ಶೇ. 92 ಹಾಗೂ ಸಾಗರ ಸರ್ಕಾರಿ ಕಾಲೇಜಿಗೆ...

ದ್ವಿತೀಯ ಪಿಯುಸಿ ಫಲಿತಾಂಶ: ಆನಂದಪುರ ಸರ್ಕಾರಿ ಕಾಲೇಜಿಗೆ ಶೇ. 92 ಹಾಗೂ ಸಾಗರ ಸರ್ಕಾರಿ ಕಾಲೇಜಿಗೆ ಶೇ 81.75 %ಯಶಸ್ಸು..!!

95
0

✒️…ಅಮಿತ್ ಆರ್ ಆನಂದಪುರ

ಸಾಗರ:ಆನಂದಪುರ ಸರ್ಕಾರಿ ಪದವಿ ಪೂರ್ವ ಕಾಲೇಜು ಈ ಬಾರಿ 92% ಫಲಿತಾಂಶವನ್ನು ಪಡೆದು ಕೊಂಡಿದೆ ಎಂದು ಕಾಲೇಜಿನ ಪ್ರಾಂಶುಪಾಲ ರವಿಶಂಕರ್ ತಿಳಿಸಿದರು.

ಇವರು ಇಂದು ಫಲಿತಾಂಶದ ಕುರಿತು ಪತ್ರಕರ್ತರೊಂದಿಗೆ ಮಾತನಾಡಿ ನಮ್ಮ ಕಾಲೇಜಿನಲ್ಲಿ ಒಟ್ಟು 96 ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಬರೆದಿದ್ದರು ಅವರಲ್ಲಿ 14 ಜನ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ ಅವರಲ್ಲಿ ವಿಜ್ಞಾನ ವಿಭಾಗದಲ್ಲಿ ಕೌಶಿಕ್ 569 ಅಂಕ, ಹಾಗೂ ವಾಣಿಜ್ಯ ನಿಕಿತಾ ಆರ್ 551 ಅಂಕ ಮತ್ತು ಕಲಾವಿಭಾಗದಲ್ಲಿ ಅಮೂಲ್ಯ ಹೆಚ್ ಜಿ 543 ಅಂಕ ಇವರೆಲ್ಲರೂ ವಿಭಾಗವಾರು ಅತಿ ಹೆಚ್ಚು ಅಂಕ ಗಳಿಸಿರುವುದಾಗಿ ತಿಳಿಸಿದರು.

ಕಾಲೇಜಿನಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿಜ್ಞಾನ ವಿಭಾಗದ ಕೌಶಿಕ್ ಗೆ ಕಾಲೇಜಿನ ಪ್ರಾಂಶುಪಾಲ ರವಿಶಂಕರ್ ಹಾಗೂ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಬಿಡಿ ರವಿಕುಮಾರ್ ಮತ್ತು ಉಪನ್ಯಾಸಕರು ಸನ್ಮಾನಿಸುತ್ತಿರುವ ದೃಶ್ಯ

53 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ,17ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಮತ್ತು 4 ಜನ ಪಾಸಾಗಿರುವುದಾಗಿ ತಿಳಿಸಿದರು.

ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ಪ್ರಾಂಶುಪಾಲರು, ಉಪನ್ಯಾಸ ವರ್ಗದವರು ಹಾಗೂ ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರು ,ಮತ್ತು ವಿಶೇಷವಾಗಿ ಆನಂದಪುರ ಕಂದಾಯ ಇಲಾಖೆಯ ಉಪತಾಸಿಲ್ದಾರ್ ಶಾಂತ ಮೂರ್ತಿ ಮತ್ತು ಇಲಾಖೆಯವರು ಶುಭ ಹಾರೈಸಿದ್ದಾರೆ.

ಸಾಗರ ಸರ್ಕಾರಿ ಪದವಿ ಪೂರ್ವ ಕಾಲೇಜು

ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಸಾಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಶೇ. 81.75 ರಷ್ಟು ಉತ್ತಮ ಫಲಿತಾಂಶ ದಾಖಲಿಸುವ ಮೂಲಕ ಗಮನಾರ್ಹ ಸಾಧನೆ ಮಾಡಿದೆ.

ಕಾಲೇಜಿನಿಂದ ಒಟ್ಟು 1167 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅದರಲ್ಲಿ 954 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.ಅತ್ಯುನ್ನತ ಶ್ರೇಣಿ (Distinction): 169 ವಿದ್ಯಾರ್ಥಿಗಳು,ಪ್ರಥಮ ಶ್ರೇಣಿ: 551 ವಿದ್ಯಾರ್ಥಿಗಳು,ದ್ವಿತೀಯ ಶ್ರೇಣಿ: 173 ವಿದ್ಯಾರ್ಥಿಗಳು,ತೃತೀಯ ಶ್ರೇಣಿ: 61 ವಿದ್ಯಾರ್ಥಿಗಳು ಉತ್ತೀರ್ಣ ಹೊಂದಿದ್ದಾರೆ.

ಮೂರು ವಿಭಾಗಗಳಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳ ವಿವರ ಇಂತಿದೆ:

ವಾಣಿಜ್ಯ ವಿಭಾಗದಲ್ಲಿ ಕಾರ್ತಿಕ್ ಕಾಮತ್ 593 ಅಂಕ , ವಿಜ್ಞಾನ ವಿಭಾಗದಲ್ಲಿ ಹಿಮಾಂಶು ಕೆ. ಜಿ. 585 ಅಂಕ ಮತ್ತು ಕಲಾ ವಿಭಾಗದಲ್ಲಿ ಅದೀತಾ ಎಂ. ಡಿ. 573 ಅಂಕ ಗಳಿಸಿರುವುದಾಗಿ ಕಾಲೇಜಿನ ಪ್ರಾಂಶುಪಾಲರಾದ ಸತ್ಯನಾರಾಯಣ ತಿಳಿಸಿದ್ದಾರೆ.

ಉತ್ತೀರ್ಣ ಹೊಂದಿದ ವಿದ್ಯಾರ್ಥಿಗಳಿಗೆ ಕಾಲೇಜಿನ ಪ್ರಾಂಶುಪಾಲರು ಮತ್ತು ಉಪನ್ಯಾಸಕರ ಹಾಗೂ ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರು ಅಭಿನಂದನೆ ಸಲ್ಲಿಸಿದ್ದಾರೆ.

ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ:https://chat.whatsapp.com/CnYYumPSez6AMYyw8cHG9A?mode=ac_t