✒️..ಅಮಿತ್ ಆರ್ ಆನಂದಪುರ
ಶಿವಮೊಗ್ಗ: ವಿದ್ಯಾರ್ಥಿನಿಯು ಇನ್‌ಸ್ಟಾ ಗ್ರಾಮ್‌ನಲ್ಲಿ ವರ್ಕ್ ಪ್ರಮ್ ಹೋಮ್ ಜಾಹೀರಾತು ನೋಡಿ ನಂಬಿ ಕ್ಲಿಕ್ ಮಾಡಿದ ನಂತರ ಲಕ್ಷ ಲಕ್ಷ ಹಣ ದೋಚಿದ ಸೈಬರ ಕಳ್ಳರು.
ಮನೆಯಲ್ಲೇ ಕುಳಿತು ಕೆಲಸ ಮಾಡುವ ಆಮಿಷಕ್ಕೆ ಒಳಗಾದ ನಗರದ ವಿದ್ಯಾರ್ಥಿನಿ ಯೊಬ್ಬರು ₹2,12,340 ಹಣ ಕಳೆದುಕೊಂಡು ವಂಚನೆಗೊಳಗಾಗಿದ್ದಾರೆ.
ವಿದ್ಯಾರ್ಥಿನಿಯು ಇನ್‌ಸ್ಟಾ ಗ್ರಾಮ್‌ನಲ್ಲಿ ವರ್ಕ್ ಪ್ರಮ್ ಹೋಮ್ ಜಾಹೀರಾತು ನೋಡಿ ಲಿಂಕ್ ಕ್ಲಿಕ್ ಮಾಡಿದ್ದರು. ನಂತರ ಟೆಲಿಗ್ರಾಮ್ ಮೂಲಕ ಸಂಪರ್ಕಿಸಿದ ವಂಚಕರು, ಹೋಟೆಲ್ ಮತ್ತು ಆಪ್‌ಗಳಿಗೆ ರಿವ್ಯೂ ನೀಡುವ ಟಾಸ್ಕ್ ನೀಡಿದ್ದರು. ಆರಂಭದಲ್ಲಿ ಸಣ್ಣ ಮೊತ್ತದ ಹಣವನ್ನು ಕಟ್ಟಿಸಿಕಂಡು ಟಾಸ್ಕ್ ನೀಡಿ ಬಳಿಕ ವಿದ್ಯಾರ್ಥಿನಿ ಕಟ್ಟಿದ್ದ ಹಣಕ್ಕಿಂತಲು ಹೆಚ್ಚಿಗೆ ಹಣವನ್ನು ಅವರ ಖಾತೆಗೆ ಜಮೆ ಮಾಡುವ ಮೂಲಕ ನಂಬಿಕೆ ಹುಟ್ಟಿಸಿದ್ದರು.

ಇದನ್ನು ನಂಬಿದ ವಿದ್ಯಾರ್ಥಿನಿ ಹೆಚ್ಚಿನ ಲಾಭಾಂಶದ ಆಸೆಗಾಗಿ ಹಂತ ಹಂತವಾಗಿ ಹೆಚ್ಚುವರಿ ಹಣ ಹೂಡಿಕೆ ಮಾಡಿದ್ದಾರೆ.
ಹೆಚ್ಚಿನ ಲಾಭದ ಆಮಿಷವೊಡ್ಡಿ ಆರೋಪಿಗಳು ವಿದ್ಯಾರ್ಥಿನಿಯಿಂದ ಒಟ್ಟು ₹2,12,340 ವರ್ಗಾವಣೆ ಮಾಡಿಸಿಕೊಂಡು ವಂಚಿಸಿದ್ದಾರೆ. ನಂತರ ಹಣ ವಾಪಸ್ ನೀಡದೆ ಸತಾಯಿಸಿದಾಗ ತಾನು ವಂಚನೆ ಗೊಳಗಾಗಿರುವುದು ವಿದ್ಯಾರ್ಥಿನಿಗೆ ತಿಳಿದುಬಂದಿದೆ. ಈ ಸಂಬಂಧ ಶಿವಮೊಗ್ಗದ ಸಿ.ಇ.ಎನ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ:https://chat.whatsapp.com/CnYYumPSez6AMYyw8cHG9A?mode=ac_t









