Home ಶಿವಮೊಗ್ಗ ಯುವಕನ ಸಾವಿಗೆ ಕಾರಣವಾದ ಚಿಕ್ಕನ್ ಮೂಳೆ..!!

ಯುವಕನ ಸಾವಿಗೆ ಕಾರಣವಾದ ಚಿಕ್ಕನ್ ಮೂಳೆ..!!

26
0

✒️..ಅಮಿತ್ ಆರ್ ಆನಂದಪುರ

ಶಿವಮೊಗ್ಗ:ಗಂಟಲಿನಲ್ಲಿ ಚಿಕ್ಕನ್ ಮೂಳೆ ಸಿಕ್ಕಿಕೊಂಡು ಯುವಕನೋರ್ವ ಮೃತಪಟ್ಟ ದುರ್ಘಟನೆ ಸಂಭವಿಸಿದೆ.

ಜನ್ಮದಿನದ ಔತಣ ಕೂಟದಲ್ಲಿ ಭಾಗಿಯಾಗಿದ್ದ ಯುವಕನೊಬ್ಬ ಗಂಟಲಲ್ಲಿ ಚಿಕನ್ ಮೂಳೆ ಸಿಲುಕಿ ಮೃತಪಟ್ಟ ಘಟನೆ ತಾಲೂಕಿನ ಕುಂಸಿ ಸಮೀಪದ ಚನ್ನಹಳ್ಳಿಯಲ್ಲಿ ನಡೆದಿದೆ.

ಸಚಿನ್ (21) ಮೃತ ಯುವಕ. ಗ್ರಾಮಸ್ಥರೊಬ್ಬರು ಜನ್ಮದಿನದ ಹಿನ್ನೆಲೆಯಲ್ಲಿ ತಮ್ಮ ನಿರ್ಮಾಣ ಹಂತದ ಮನೆ ಬಳಿ ಔತಣಕೂಟ (ಏ.17)ಏರ್ಪಡಿಸಿದ್ದರು. ಅಲ್ಲಿಗೆ ಬಂದಿದ್ದ ಸಚಿನ್ ಊಟ ಹಾಕಿಸಿಕೊಂಡು ಕಾಮಗಾರಿ ನಡೆಯುತ್ತಿದ್ದ ಮನೆಯೊಳಗೆ ಹೋಗಿದ್ದ. ಊರಿನವರೆಲ್ಲರೂ ಊಟ ಮುಗಿಸಿ ಮನೆಗೆ ಹೋಗಿದ್ದಾರೆ.

(ಏ.18) ಶುಕ್ರವಾರ ಮನೆ ಕಾಮಗಾರಿ ಮಾಡುವ ಕೆಲಸಗಾರರು ಸ್ಥಳಕ್ಕೆ ಬಂದಾಗ ಸಚಿನ್ ಮೃತಪಟ್ಟಿರುವುದು ಕಂಡಿದೆ. ಸಚಿನ್ ಮದ್ಯ ಸೇವಿಸಿದ್ದು, ಚಿಕನ್ ಮೂಳೆ ಗಂಟಲಲ್ಲಿ ಸಿಲುಕಿ ಮೃತಪಟ್ಟಿದ್ದಾನೆ ಎನ್ನಲಾಗುತ್ತಿತ್ತು.

ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ಮೃತ ಸಚಿನ್ ಮದ್ಯಪಾನ ಮಾಡಿದ್ದ. ಆತನ ಗಂಟಲಲ್ಲಿ ಆಹಾರ ಸಿಲುಕಿಕೊಂಡಿದ್ದೇ ಈ ಸಾವಿಗೆ ಕಾರಣ ಎಂದು ಎಂದು ದೃಢಪಡಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.