ಮನೆ Blog ಸಾಗರ: ನಾಳೆ ಕಾಗೋಡು ಚಳುವಳಿಯ 75ರ ಸ್ಮರಣೆ; ಬಿ. ಸ್ವಾಮಿರಾವ್ ಅವರಿಗೆ ‘ನೇಗಿಲಯೋಗಿ’ ಪ್ರಶಸ್ತಿ ಪ್ರದಾನ..!!

ಸಾಗರ: ನಾಳೆ ಕಾಗೋಡು ಚಳುವಳಿಯ 75ರ ಸ್ಮರಣೆ; ಬಿ. ಸ್ವಾಮಿರಾವ್ ಅವರಿಗೆ ‘ನೇಗಿಲಯೋಗಿ’ ಪ್ರಶಸ್ತಿ ಪ್ರದಾನ..!!

15
0

✒️..ಅಮಿತ್ ಆರ್ ಆನಂದಪುರ

, ಸಾಗರ:ಐತಿಹಾಸಿಕ ಕಾಗೋಡು ಸತ್ಯಾಗ್ರಹದ 75ನೇ ವರ್ಷದ ಸ್ಮರಣಾರ್ಥ ಡಾ. ಹೆಚ್. ಗಣಪತಿಯಪ್ಪ ಸೇವಾ ಟ್ರಸ್ಟ್ ಹಾಗೂ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಸಂಯುಕ್ತವಾಗಿ ನಗರದಲ್ಲಿ ಏಪ್ರಿಲ್ 18ರಂದು ಸಂಜೆ 6 ಗಂಟೆಗೆ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿವೆ.

ನಗರದ ಶಂಕರ ಮಠದಲ್ಲಿ ನಡೆಯಲಿರುವ ಈ ಸಮಾರಂಭದಲ್ಲಿ ಹೊಸನಗರದ ಮಾಜಿ ಶಾಸಕ ಬಿ. ಸ್ವಾಮಿರಾವ್ ಅವರಿಗೆ ರಾಜ್ಯಮಟ್ಟದ ‘ಡಾ. ಹೆಚ್. ಗಣಪತಿಯಪ್ಪ ನೇಗಿಲಯೋಗಿ’ ಪ್ರಶಸ್ತಿಯನ್ನು ಪ್ರದಾನ ಮಾಡಿ ಗೌರವಿಸಲಾಗುವುದು. ಸಾಗರದ ಶಾಸಕ ಗೋಪಾಲಕೃಷ್ಣ ಬೇಳೂರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.

ವಿಶೇಷ ಉಪನ್ಯಾಸ:


ಇದೇ ಸಂದರ್ಭದಲ್ಲಿ ಸಮಾಜವಾದಿ ಚಿಂತಕ ಬಿ.ಆರ್. ಜಯಂತ್ ಅವರು ‘ಭೂಮಿ ಬದುಕು: ಇವತ್ತಿನ ಆತಂಕಗಳು’ ಎಂಬ ವಿಷಯದ ಕುರಿತು ವಿಚಾರ ಮಂಡಿಸಲಿದ್ದಾರೆ. ರೈತ ಚಳುವಳಿಯ ಫಲಶ್ರುತಿ ಹಾಗೂ ವರ್ತಮಾನದಲ್ಲಿ ಭೂಮಿ ಹಕ್ಕಿನ ಕುರಿತಾದ ಸವಾಲುಗಳ ಬಗ್ಗೆ ಅವರು ಬೆಳಕು ಚೆಲ್ಲಲಿದ್ದಾರೆ.

ಕಾರ್ಯಕ್ರಮದಲ್ಲಿ ತಾಲ್ಲೂಕಿನ ವಿವಿಧ ಗಣ್ಯರು ಭಾಗವಹಿಸಲಿದ್ದು, ಭೂಮಿ ಚಳುವಳಿಯ ಫಲಾನುಭವಿಗಳು, ರೈತ ಹೋರಾಟಗಾರರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಟ್ರಸ್ಟ್ ಹಾಗೂ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.

ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ:https://chat.whatsapp.com/CnYYumPSez6AMYyw8cHG9A?mode=ac_t