✒️..ಅಮಿತ್ ಆರ್ ಆನಂದಪುರ
ಶಿವಮೊಗ್ಗ, :ಹುಲಿಕಾಲ್ ಘಾಟ್ ನಲ್ಲಿ ಸಂಭವಿಸಿರುವ ಭೂ ಕುಸಿತದಿಂದ ಸಂಚಾರ ಮಾರ್ಗ ಬಂದ್ ಆಗಿದ್ದು, ಪರ್ಯಾಯ ಮಾರ್ಗ ವಾಹನ ಸವಾರರು ಅನುಸರಿಸಬೇಕು.
ಸಾರ್ವಜನಿಕ ಹಿತಾದೃಷ್ಟಿಯಿಂದ ಕೇಂದ್ರ ಮೋಟಾರ್ ವಾಹನ ಕಾಯ್ದೆ 1998ರ ಕಲಂ 115 ಹಾಗೂ ಕರ್ನಾಟಕ ಮೋಟರ್ ವಾಹನ ನಿಯಮಾವಳಿ 1989 ರ ಕಲಂ 221(ಎ) (2)ಮತ್ತು (5) ರನ್ವಯ ಪರ್ಯಾಯ ಮಾರ್ಗವನ್ನು ಕಲ್ಪಿಸಿ ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ ಆದೇಶಿಸಿದ್ದಾರೆ.
ಹಾಲಿ ಬಳಕೆಗೆ ಬದಲಾಗಿ ಪರ್ಯಾಯ ಮಾರ್ಗ:
ತೀರ್ಥಹಳ್ಳಿ – ರಾವೆ- ಕಾನುಗೋಡು-ನಗರ- ಕೊಲ್ಲೂರು- ಕುಂದಾಪುರ ರಸ್ತೆ
ತೀರ್ಥಹಳ್ಳಿ-ಯಡೂರು- ಮಾಸ್ತಿಕಟ್ಟೆ-ಕಾನುಗೋಡು-ನಗರ- ಕೊಲ್ಲೂರು- ಕುಂದಾಪುರ ರಸ್ತೆ
ಶಿವಮೊಗ್ಗ – ಹೊನ್ನಾವರ ರಾಷ್ಟ್ರೀಯ ಹೆದ್ದಾರಿ ಮೂಲಕ ಹೊನ್ನಾವರ ನಂತರ ಹೊನ್ನಾವರದಿಂದ – ಭಟ್ಕಾಳ- ಬೈಂದೂರು- ಕುಂದಾಪುರ ರಸ್ತೆ









