✒️..ಅಮಿತ್ ಆರ್ ಆನಂದಪುರ
ಶಿವಮೊಗ್ಗ: ರಾಜ್ಯಮಟ್ಟದ ದಸರಾ ಸಿಎಂ ಕಪ್ ಕುಸ್ತಿ ಸ್ಪರ್ಧೆಗೆ ಶಿವಮೊಗ್ಗದ ನೆಹರು ಕ್ರೀಡಾಂಗಣದಲ್ಲಿ ತರಬೇತಿ ಪಡೆಯುತ್ತಿದ್ದ 11 ಕ್ರೀಡಾಪಟುಗಳು ಆಯ್ಕೆಯಾಗಿದ್ದು, ಕ್ರೀಡಾಂಗಣಕ್ಕೆ ಕೀರ್ತಿ ತಂದಿದ್ದಾರೆ.
ಪುರುಷರ ಫ್ರೀಸ್ಟೈಲ್ ವಿಭಾಗದಲ್ಲಿ 61 ಕೆಜಿ ವಿಭಾಗಕ್ಕೆ ಕಾರ್ತಿಕ್ ಆರ್. ನಾಯ್ಕ್ ಹಾಗೂ 86 ಕೆಜಿ ವಿಭಾಗಕ್ಕೆ ಇಫ್ತಿಕಾ ಮುಲ್ಲಾ ಆಯ್ಕೆಯಾಗಿದ್ದಾರೆ.
ಪುರುಷರ ಗ್ರೆಕೊ-ರೋಮನ್ ವಿಭಾಗದಲ್ಲಿ 67 ಕೆಜಿ ವಿಭಾಗಕ್ಕೆ ರಂಗನಾಥ್, 82 ಕೆಜಿ ವಿಭಾಗಕ್ಕೆ ದರ್ಶನ್ ಹಾಗೂ 92 ಕೆಜಿ ವಿಭಾಗಕ್ಕೆ ಚನ್ನಬಸವರಾಜ ಆಯ್ಕೆಯಾಗಿದ್ದಾರೆ.
ಮಹಿಳಾ ವಿಭಾಗದಲ್ಲಿ 50 ಕೆಜಿ ವಿಭಾಗಕ್ಕೆ ನಿಶ್ಚಿತಾ, 53 ಕೆಜಿಗೆ ಜಲಜಾಕ್ಷಿ ಎಸ್., 55 ಕೆಜಿಗೆ ಸೃಷ್ಟಿ ಪಿ., 68 ಕೆಜಿ ವಿಭಾಗಕ್ಕೆ ಕುಮುದಾ ಎಸ್.ಕೆ. ಹಾಗೂ ಉಮಾ ಮತ್ತು 76 ಕೆಜಿ ವಿಭಾಗಕ್ಕೆ ಕವಿನಾ ಎಂ. ಆಯ್ಕೆಯಾಗಿದ್ದಾರೆ.

ಶಿವಮೊಗ್ಗದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರೇಖ್ಯಾ ನಾಯ್ಕ್ ಅವರು ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾದ ಕ್ರೀಡಾಪಟುಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಕ್ರೀಡಾಪಟುಗಳಿಗೆ ತರಬೇತಿ ನೀಡಿದ ಕೋಚ್ಗಳಾದ ರಾಜಪ್ಪ ಪಳಕೆ ಮತ್ತು ಸಂಜಯ್ ಅವರ ಮಾರ್ಗದರ್ಶನವೂ ಈ ಸಾಧನೆಯಲ್ಲಿ ಪ್ರಮುಖವಾಗಿದೆ.
ರಾಜ್ಯಮಟ್ಟದ ದಸರಾ ಸಿಎಂ ಕಪ್ನಲ್ಲಿ ಕ್ರೀಡಾಪಟುಗಳು ಉತ್ತಮ ಪ್ರದರ್ಶನ ನೀಡಿ ಶಿವಮೊಗ್ಗ ಜಿಲ್ಲೆಗೆ ಕೀರ್ತಿ ತರಲಿ ಎಂದು ಕ್ರೀಡಾಭಿಮಾನಿಗಳು ಹಾರೈಸಿದ್ದಾರೆ.











