ಮನೆ ಶಿವಮೊಗ್ಗ ಆನಂದಪುರದಲ್ಲಿ ಏಪ್ರಿಲ್ 5 ರಿಂದ ಕಬಡ್ಡಿ, ಅಥ್ಲೆಟಿಕ್ ಬೇಸಿಗೆ ಶಿಬಿರ..!!

ಆನಂದಪುರದಲ್ಲಿ ಏಪ್ರಿಲ್ 5 ರಿಂದ ಕಬಡ್ಡಿ, ಅಥ್ಲೆಟಿಕ್ ಬೇಸಿಗೆ ಶಿಬಿರ..!!

20
0

✒️..ಅಮಿತ್ ಆರ್ ಆನಂದಪುರ

ಆನಂದಪುರ: ಸ್ಥಳೀಯ ಉದಯೋನ್ಮುಖ ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ಆನಂದಪುರ ಯುನೈಟೆಡ್ ಕಬಡ್ಡಿ ಕ್ಲಬ್ ವತಿಯಿಂದ 2026ರ ಸಾಲಿನ ಕಬಡ್ಡಿ ಹಾಗೂ ಅಥ್ಲೆಟಿಕ್ ಬೇಸಿಗೆ ಶಿಬಿರವನ್ನು ಆಯೋಜಿಸಲಾಗಿದೆ.

ಏಪ್ರಿಲ್ 5 ರಿಂದ ಮೇ 25 ರವರೆಗೆ ಸುದೀರ್ಘವಾಗಿ ನಡೆಯಲಿರುವ ಈ ಶಿಬಿರವು ಕೆ.ಪಿ.ಎಸ್. ಆನಂದಪುರದ ಹೊರಾಂಗಣ ಮೈದಾನದಲ್ಲಿ ನಡೆಯಲಿದೆ. ‘ಭಾರತದ ಭವಿಷ್ಯದ ಚಾಂಪಿಯನ್‌ಗಳನ್ನು ರೂಪಿಸಿ’ ಎಂಬ ಮಹತ್ವಾಕಾಂಕ್ಷೆಯೊಂದಿಗೆ ಕ್ಲಬ್ ಈ ತರಬೇತಿಯನ್ನು ಹಮ್ಮಿಕೊಂಡಿದೆ.

ತರಬೇತಿಯ ವಿವರ:
ಶಿಬಿರಾರ್ಥಿಗಳಿಗೆ ಪ್ರತಿದಿನ ಬೆಳಿಗ್ಗೆ 6:30 ರಿಂದ 8:30 ಹಾಗೂ ಸಂಜೆ 4:00 ರಿಂದ 6:00 ರವರೆಗೆ ತರಬೇತಿ ನೀಡಲಾಗುತ್ತದೆ. ವಿಶೇಷವಾಗಿ ಮಕ್ಕಳಲ್ಲಿ ದೈಹಿಕ ಸಾಮರ್ಥ್ಯ ವೃದ್ಧಿ (Strength and Conditioning), ಚುರುಕುತನ (Agility) ಹಾಗೂ ಅಥ್ಲೆಟಿಕ್ ಕೌಶಲಗಳನ್ನು ವೃತ್ತಿಪರ ಮಾರ್ಗದರ್ಶನದಲ್ಲಿ ಕಲಿಸಿಕೊಡಲಾಗುತ್ತದೆ.

ವಯೋಮಿತಿ ಮತ್ತು ಪ್ರವೇಶ:
8 ವರ್ಷ ಮೇಲ್ಪಟ್ಟ ಬಾಲಕ-ಬಾಲಕಿಯರು ಸೇರಿದಂತೆ ಪುರುಷರು ಮತ್ತು ಮಹಿಳೆಯರಿಗೂ ಶಿಬಿರದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಆಸಕ್ತರು ₹999/- ಶುಲ್ಕ ಪಾವತಿಸಿ ಪ್ರವೇಶ ಪಡೆಯಬಹುದಾಗಿದ್ದು, ಸೀಮಿತ ಸೀಟುಗಳಿಗೆ ಮಾತ್ರ ಅವಕಾಶವಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಆಸಕ್ತರು ಸಂಘಟಕರಾದ ವಿನಯ್ ಬಿ.ವಿ. (7204213783) ಅಥವಾ ಉಪೇಂದ್ರ (8861177539) ಅವರನ್ನು ಸಂಪರ್ಕಿಸಿ .

ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ:https://chat.whatsapp.com/CnYYumPSez6AMYyw8cHG9A?mode=ac_t