Home Shivamogga ದುರ್ಗಿಗುಡಿಯ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಆ.29ರಿಂದ 355ನೇ ಆರಾಧನಾ ಮಹೋತ್ಸವ..!!

ದುರ್ಗಿಗುಡಿಯ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಆ.29ರಿಂದ 355ನೇ ಆರಾಧನಾ ಮಹೋತ್ಸವ..!!

32
0

ಶಿವಮೊಗ್ಗ: ದುರ್ಗಿಗುಡಿಯ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವವನ್ನು ಆ.29, 30 ಮತ್ತು 31ರಂದು ಮೂರು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಭಕ್ತಿಭಾವದಿಂದ ಆಚರಿಸಲಾಗುತ್ತಿದೆ.

ಆ.29ರಂದು ಶನಿವಾರ ಪೂರ್ವಾರಾಧನೆ, ಆ.30ರಂದು ಭಾನುವಾರ ಗುರುಗಳ ಪುಣ್ಯದಿನ ಮಧ್ಯಾರಾಧನೆ ಹಾಗೂ ಆ.31ರಂದು ಸೋಮವಾರದ ಉತ್ತರಾರಾಧನೆ ನಡೆಯಲಿದೆ. ಈ ಮೂರು ದಿನಗಳಲ್ಲೂ ಬೆಳಗ್ಗೆ 11.30ರವರೆಗೆ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ನಡೆಯಲಿವೆ.

ಮಹೋತ್ಸವದ ಅಂಗವಾಗಿ ಪ್ರತಿದಿನ ವಿಶೇಷ ಅಭಿಷೇಕ, ಸರ್ವಸೇವೆ, ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಆ.28ರಂದು ಶುಕ್ರವಾರ ಹುಣ್ಣಿಮೆಯ ಪ್ರಯುಕ್ತ ಬೆಳಗ್ಗೆ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಸಂಜೆ ಧ್ವಜಾರೋಹಣ, ಗೋಪೂಜೆ, ಲಕ್ಷ್ಮೀಪೂಜೆ ಮತ್ತು ಧಾನ್ಯಪೂಜೆ ನಡೆಯಲಿದೆ.

ನಗರದ ಎಲ್ಲ ಭಕ್ತರು ಹಾಗೂ ಸೇವಾ ಮನೋಭಾವದ ಭಕ್ತಾದಿಗಳು ಶ್ರೀ ಗುರುರಾಯರ ಆರಾಧನಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಶ್ರೀ ಗುರುಗಳ ಕೃಪೆಗೆ ಪಾತ್ರರಾಗುವಂತೆ ಶ್ರೀ ರಾಘವೇಂದ್ರ ಸ್ವಾಮಿ ಸೇವಾ ಸಮಿತಿ, ದುರ್ಗಿಗುಡಿ, ಶಿವಮೊಗ್ಗ ವತಿಯಿಂದ ಮನವಿ ಮಾಡಲಾಗಿದೆ.