
ಆನಂದಪುರ:
ಕಾಗೋಡು ತಿಮ್ಮಪ್ಪನವರಿಗೆ ಸನ್ಮಾನ ಮಾಡುತ್ತೇನೆ, 10,000 ಜನ ಸೇರಿಸುತ್ತೇನೆ ಎಂದು ತಾಲೂಕಿನಲ್ಲಿ 25ರಿಂದ 50 ಲಕ್ಷ ಹಣ ವಸೂಲಿ ಮಾಡಿ 250 ಜನ ಸೇರಿಸಿ ಹಣ ಹೊಡೆದ ಕಳ್ಳ ಅವನು ಎಂದು ಸೋಮಶೇಖರ್ ಲಾವಿಗೆರೆ ವಿರುದ್ಧ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ರತ್ನಾಕರ ಹೊನುಗೋಡು ವಾಗ್ದಾಳಿ ನಡೆಸಿದರು.
ಇವರು ಇಂದು ಆನಂದಪುರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದರು.ವಿರೋಧ ಪಕ್ಷ ನಾಯಕನಾಗಿ ತಾಲೂಕಿನ ಸಮಸ್ಯೆ ತಿಳಿಸಿದರೆ ಶಾಸಕರು ಉತ್ತರ ಕೊಡುವುದನ್ನು ಬಿಟ್ಟು ಕಾಂಗ್ರೆಸ್ ಪಕ್ಷದವರ ಬಳಿಯಿಂದಲೇ ತಾಲೂಕು ಪಂಚಾಯಿತಿ ಎದುರು ಸಾರ್ವಜನಿಕವಾಗಿ ಒದೆ ತಿಂದ ಲೂಟಿಕೋರನಿಗೆ ಹೇಳಿ ಪತ್ರಿಕಾಗೋಷ್ಠಿ ಮಾಡಿಸುವುದು ಶಾಸಕರಿಗೆ ಶೋಭೆ ತರುವಂತದ್ದಲ್ಲ.

ಸರ್ಕಾರಿ ಜಾಗದಲ್ಲಿ ಹತ್ತಾರು ಎಕರೆ ಅಕ್ರಮ ಕಲ್ಲು ಕೋರೆ ಮಾಡಿ ಹಾಗೂ ಹೊಸನಗರದಲ್ಲಿ ಮಣ್ಣು ಮಿಶ್ರಿತ ಮರಳು ಮಾರಾಟ ಮಾಡಿ, ಜನ ಅಲ್ಲಿಂದ ನಿಮ್ಮನ್ನು ಓಡಿಸಿರುವುದು ನಾವು ಮರೆತಿಲ್ಲ ಎಂದು ಸೋಮಶೇಖರ್ ಲಾವಿಗೆರೆ ವಿರುದ್ಧ ವಾಗ್ದಾಳಿ ನಡೆಸಿದರು.
ಭೀಮನೇರಿ ಕೊರಲಿಕೊಪ್ಪದಲ್ಲಿ ನಕಲಿ ದಾಖಲೆ ಸೃಷ್ಟಿಸಿ ಜಮೀನು ಕಬಳಿಸುವ ಕೆಲಸ ಮಾಡಿದ್ದಾರೆ. ಇದಲ್ಲದೆ ಹುತ್ತಾದಿಂಬಾದಲ್ಲೂ ಸಹ ಜಮೀನು ಕಬಳಿಸಲು ಹೊರಟಾಗ ರೈತರು ಅಲ್ಲಿಂದ ಓಡಿಸಿದ್ದಾರೆ. ಇಂಥವರು ನನ್ನ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತರಿಂದ ಖರೀದಿಸುವ ಶುಂಠಿಗೆ ಹಣ ನೀಡಿಲ್ಲ ಎಂದು ಆರೋಪ ಮಾಡುವ ನೀವು ದೇವಸ್ಥಾನಕ್ಕೆ ಬಂದು ಸಾಬೀತುಪಡಿಸಬೇಕು. ಗಣಪತಿ ದೇವಸ್ಥಾನ ಸಿಗಂದೂರು ದೇವಸ್ಥಾನ ಇಲ್ಲವೇ ಧರ್ಮಸ್ಥಳ ದೇವಸ್ಥಾನದಲ್ಲಿ ಬಂದು ಸಾಬೀತುಪಡಿಸಿದರೆ ಅಲ್ಲಿಯೇ ಹಣ ನೀಡುತ್ತೇನೆಂದು ಸವಾಲು ಎಸೆದರು.
ನಿನಗೆ ಒಂದು ಪ್ರೆಸ್ ಮೀಟ್ ಮಾಡುವುದಕ್ಕೆ ವಾರಗಟ್ಟಲೆ ಬೇಕಾಯಿತು . ನಿನ್ನ ಭೂಟಾಟಿಕೆಗಳ ಮಾತು ಹಾಗೂ ನಿಮ್ಮ ಕೈಯು ಬಾಯು ಬಿಟ್ಟುಬಿಡು, ನಿನ್ನಂತವರನ್ನು ಬಹಳ ಜನ ನೋಡಿದ್ದೇನೆ ಎಂದು ಸೋಮಶೇಖರ್ ಲಾವಿಗೆರೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಗುರುರಾಜ್, ಉಪಾಧ್ಯಕ್ಷೆ ಮುಕಾಂಬು, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಭರ್ಮಪ್ಪ, ಪ್ರಮುಖರಾದ ಬೂದ್ಯಪ್ಪ , ಗಣಪತಿ, ದೇವರಾಜ್, ರೇವಪ್ಪ ಹೊಸಕೊಪ್ಪ, ಗಂಗಾಧರ, ಧನರಾಜ್, ಚಂದ್ರು, ಗುರು ಮದ್ಲೆಸರ, ಹಿರೆಯಣ್ಯಪ್ಪ , ರವಿ, ಪ್ರಕಾಶ್, ಷಣ್ಮುಖ, ನಾಗರಾಜ್, ಶಿವು ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಜಾಯಿನ್ ಆಗಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ:https://chat.whatsapp.com/CnYYumPSez6AMYyw8cHG9A?mode=ac_t








