ಸಾಗರ(ಆನಂದಪುರ): ಅತಿವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯಿಂದ ರಸ್ತೆ ಬದಿಯಲ್ಲಿ ನಿಂತಿದ್ದ 8 ವರ್ಷದ ಬಾಲಕನಿಗೆ ಲಗೇಜ್ ಆಟೋ ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಸಾಗರ ತಾಲೂಕಿನ ದಾಸಕೊಪ್ಪ ಗ್ರಾಮದ ಪಾಂಡುರಂಗ ದೇವಾಲಯದ ಬಳಿ ಸೆ.27ರಂದು ಸಂಜೆ ನಡೆದಿದೆ.
ಗೌತಮಪುರ ಕಡೆಯಿಂದ ಆನಂದಪುರದತ್ತ ಟಾಟಾ ಲಗೇಜ್ ಆಟೋ ಚಲಾಯಿಸಿಕೊಂಡು ಬರುತ್ತಿದ್ದ ಚಾಲಕ ಗೇರ್ಬೀಸ್ ಸಮೀಪದ ತೋಳಿಕಲ್ಲಿನ ಸಂತೋಷ್ ಕೊಲ್ಲಪ್ಪ ಅತಿವೇಗ ಹಾಗೂ ಜಾಗರೂಕತೆ ವಹಿಸದೆ ವಾಹನ ಚಾಲನೆ ಮಾಡಿದ ಪರಿಣಾಮ ಅಪಘಾತ ಸಂಭವಿಸಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಆನಂದಪುರದಿಂದ ಶಿಕಾರಿಪುರ ರಸ್ತೆಯ ಅಂಚಿನ ದಾಸಕೊಪ್ಪದ ಅಂಗಡಿ ಬಳಿ ನಿಂತಿದ್ದ ದಾಸಕೊಪ್ಪ ಗ್ರಾಮದ ತನ್ಮಯ್ (8), ತಂದೆ ಪ್ರಶಾಂತ್ ಕೃಷ್ಣಮೂರ್ತಿ ಎಂಬ ಬಾಲಕನಿಗೆ ಆಟೋದ ಗ್ರಿಲ್ ತಾಗಿ ಗಾಯಗೊಂಡಿದ್ದಾನೆ.

ಅಪಘಾತದಲ್ಲಿ ಬಾಲಕನ ಬಲ ಹಣೆ ಹಾಗೂ ಬಲಕೈಗೆ ಗಂಭೀರ ಗಾಯಗಳಾಗಿದ್ದು, ಹಣೆ ಭಾಗದಲ್ಲಿ ತೆರೆದ ಗಾಯವಾಗಿ ರಕ್ತಸ್ರಾವವಾಗಿದೆ. ತಕ್ಷಣ ಬಾಲಕನನ್ನು ಆನಂದಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ನಂಜಪ್ಪ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಇನ್ನು ಚಿಕಿತ್ಸೆ ಮುಂದುವರಿದಿದೆ ಎಂದು ತಿಳಿದು ಬಂದಿದೆ.
ಈ ಕುರಿತು ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ಪ್ರಕರಣದ ತನಿಖೆಯು ಮುಂದುವರಿದಿದೆ ಎಂದು ತಿಳಿದುಬಂದಿದೆ.
ಚಿಕಿತ್ಸೆಗೆ ಅಧಿಕ ವೆಚ್ಚ ಆಗುವುದರಿಂದ ನಿಮ್ಮ ಒಂದು ಸಹಾಯ ಹುಡುಗನ ಜೀವಕ್ಕೆ ಸಹಾಯಕ












