ಶಿಕಾರಿಪುರ: ಶಿಕಾರಿಪುರ ತಾಲೂಕಿನ ಕೊಟ್ಟ ಗ್ರಾಮದ ಸಮೀಪದ ಕುಮದ್ವತಿ ನದಿ ದಂಡೆಯಲ್ಲಿ ಜುಲೈ 16, ರಂದು ಅಪರಿಚಿತ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿದೆ.
ಸುಮಾರು 50 ರಿಂದ 55 ವರ್ಷ ವಯಸ್ಸಿನ ಗಂಡಸಿನ ಮೃತದೇಹವು ನೀರಿನಲ್ಲಿ ಹರಿದು ಬಂದಿದ್ದು, ಮೃತರು ನೀಲಿ ಬಣ್ಣದ ಚಡ್ಡಿ ಹಾಗೂ ಬಿಳಿ ಬಣ್ಣದ ಚೆಕ್ಸ್ ಅಂಗಿ ಧರಿಸಿದ್ದರು ಎಂದು ಪೋಲಿಸ್ ಮೂಲಗಳಿಂದ ತಿಳಿದು ಬಂದಿದೆ.
ಮೃತರ ಗುರುತು ಇನ್ನೂ ಪತ್ತೆಯಾಗಿಲ್ಲ. ಮೃತರ ವಾರಸುದಾರರು ಅಥವಾ ಸಂಬಂಧಿಕರು ಯಾರಾದರೂ ಮಾಹಿತಿ ಹೊಂದಿದ್ದಲ್ಲಿ ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.
ಸಂಪರ್ಕ ಸಂಖ್ಯೆ: 9480803366.
ಜಾಹೀರಾತು












