Home ರಾಜ್ಯ ಗಣೇಶ ವಿಸರ್ಜನೆ ವೇಳೆ 17 ವರ್ಷದ ದಲಿತ ಯುವಕ ಸಾವು..!!

ಗಣೇಶ ವಿಸರ್ಜನೆ ವೇಳೆ 17 ವರ್ಷದ ದಲಿತ ಯುವಕ ಸಾವು..!!

26
0

✒️..ಪವನ್ ಕಲ್ಯಾಣ್ ಎಸ್ಐ ಡಿ ಹಳ್ಳಿ

ಮಧುಗಿರಿ: ತಾಲ್ಲೂಕಿನ ಮಿಡಿಗೇಶಿ ಹೋಬಳಿಯ ಕಸಾಪುರ ಗ್ರಾಮದಲ್ಲಿ ಭಾನುವಾರ ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆ ವೇಳೆ ನಡೆದ ಗಲಾಟೆಯಲ್ಲಿ 17 ವರ್ಷದ ಸಿಂಹಾದ್ರಿ ಎಂಬ ಯುವಕ ಮೃತಪಟ್ಟಿರುವ ಘಟನೆ ನಡೆದಿದೆ.

ಘಟನೆಗೆ ಸಂಬಂಧಿಸಿದಂತೆ ನಾಯಕ ಸಮುದಾಯದ ಮಾರುತೇಶ್ ಎಂಬಾತನನ್ನು ಮಿಡಿಗೇಶಿ ಠಾಣೆ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪೊಲೀಸರಿಗೆ ಮೃತನ ತಾಯಿ ಅನ್ನಪೂರ್ಣ ನೀಡಿರುವ ದೂರಿನ ಪ್ರಕಾರ, ನಾಯಕ ಹಾಗೂ ಒಕ್ಕಲಿಗ ಸಮುದಾಯಗಳ ವತಿಯಿಂದ ಗಣೇಶ ವಿಸರ್ಜನೆ ಮೆರವಣಿಗೆ ನಡೆಯುತ್ತಿದ್ದ ವೇಳೆ ಸಿಂಹಾದ್ರಿ ಮೆರವಣಿಗೆಯಲ್ಲಿ ಕುಣಿಯಲು ತೆರಳಿದ್ದ. ಈ ಸಂದರ್ಭದಲ್ಲಿ ಮಾರುತೇಶ್ ಆತನೊಂದಿಗೆ ಜಗಳ ತೆಗೆದು ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.

ಮಾರುತೇಶ್ ಸಿಂಹಾದ್ರಿಯ ಕಪಾಳಕ್ಕೆ ಹೊಡೆದು, ಬಳಿಕ ರಸ್ತೆ ಬದಿಯಲ್ಲಿದ್ದ ಕಲ್ಲಿನಿಂದ ಎದೆಗೆ ಹೊಡೆದಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಹಲ್ಲೆಯಿಂದ ಅಸ್ವಸ್ಥಗೊಂಡ ಸಿಂಹಾದ್ರಿಯನ್ನು ಸ್ಥಳೀಯರು ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯೆಯೇ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ಕುರಿತು ಮಿಡಿಗೇಶಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.