ಸಾಗರ: ತಾಲೂಕಿನ ಆನಂದಪುರ ಪೊಲೀಸ್ ಠಾಣೆ ಆವರಣದಲ್ಲಿ ಇರುವ 12 ಬೈಕ್ಗಳನ್ನು ಸೆಪ್ಟೆಂಬರ್ 2, 2026ರಂದು ಬೆಳಿಗ್ಗೆ 11 ಗಂಟೆಗೆ ಸಾರ್ವಜನಿಕ ಹರಾಜು ಮೂಲಕ ವಿಲೇವಾರಿ ಮಾಡಲಾಗುವುದು ಎಂದು ಪೊಲೀಸ್ ಸಬ್ಇನ್ಸ್ಪೆಕ್ಟರ್ ಪ್ರವೀಣ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಾಗರದ ಮಾನ್ಯ ವ್ಯವಹಾರ ನ್ಯಾಯಾಧೀಶರು (ಹಿ.ವಿ.) ಹಾಗೂ ಸಿ.ಜೆ.ಎಂ. ನ್ಯಾಯಾಲಯದ ಆದೇಶದಂತೆ ಈ ವಿಲೇವಾರಿ ಪ್ರಕ್ರಿಯೆ ನಡೆಯುತ್ತಿದೆ. ಆರ್ಟಿಒ ಕಚೇರಿಯ ವರದಿಯಂತೆ, ಹರಾಜಿಗೆ ಒಳಪಡಿಸಿರುವ 12 ಬೈಕ್ಗಳು ಅನುಪಯುಕ್ತವಾಗಿದ್ದು, ಸ್ಕ್ರ್ಯಾಪ್ ಗಳಾಗಿವೆ.
ಆಸಕ್ತ ಸಾರ್ವಜನಿಕರು ಸೆಪ್ಟೆಂಬರ್ 2ರ ಬುಧವಾರ ಬೆಳಿಗ್ಗೆ 11 ಗಂಟೆಗೆ ಆನಂದಪುರ ಪೊಲೀಸ್ ಠಾಣೆ ಆವರಣದಲ್ಲಿ ನಡೆಯುವ ಸಾರ್ವಜನಿಕ ಹರಾಜಿನಲ್ಲಿ ಭಾಗವಹಿಸಬಹುದಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಾಹೀರಾತು












