Home Shivamogga ರಭಸದ ಮುಖಾಮುಖಿ ಡಿಕ್ಕಿ: ಕಾರು ಸಂಪೂರ್ಣ ನಜ್ಜುಗುಜ್ಜು, ಇಬ್ಬರು ಗಂಭೀರ..!!

ರಭಸದ ಮುಖಾಮುಖಿ ಡಿಕ್ಕಿ: ಕಾರು ಸಂಪೂರ್ಣ ನಜ್ಜುಗುಜ್ಜು, ಇಬ್ಬರು ಗಂಭೀರ..!!

46
0

ಹೊಸನಗರ:ತಾಲ್ಲೂಕಿನ ರಿಪ್ಪನಪೇಟೆ ಸೂಡೂರು ಗ್ರಾಮದ ಬಳಿ ಗಜಾನನ ಬಸ್ ಹಾಗೂ ಮಾರುತಿ ಆಲ್ಟೋ ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ, ಕಾರಿನಲ್ಲಿದ್ದ ಇಬ್ಬರು ತೀವ್ರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

ಶಿವಮೊಗ್ಗದಿಂದ ರಿಪ್ಪನ್‌ಪೇಟೆ ಮಾರ್ಗವಾಗಿ ತೆರಳುತ್ತಿದ್ದ ಗಜಾನನ ಸಂಸ್ಥೆಯ ಬಸ್ ಹಾಗೂ ಆವಿನಹಳ್ಳಿಯಿಂದ ಶಿವಮೊಗ್ಗ ಕಡೆಗೆ ಸಾಗುತ್ತಿದ್ದ ಕಾರಿನ ನಡುವೆ ಅಪಘಾತ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಆವಿನಹಳ್ಳಿ ಮೂಲದ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಸ್ಥಳೀಯರು ಗಾಯಾಳುಗಳನ್ನು ತಕ್ಷಣ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲು ಕಳುಹಿಸಿದ್ದಾರೆ.ಬಸ್ಸಿನಲ್ಲಿ ಇದ್ದವರಿಗೆ ಸಣ್ಣ ಪುಟ್ಟ ಹೊಡೆತ ಬಿದ್ದಿರುವುದಾಗಿ ತಿಳಿದು ಬಂದಿದೆ.

ಸ್ಥಳಕ್ಕೆ ರಿಪ್ಪನ್‌ಪೇಟೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.