Home Shivamogga ಶಿವಮೊಗ್ಗ ದಸರಾ ಸಂಭ್ರಮದಲ್ಲಿ ಆನೆಗಳ ಗುದ್ದಾಟ..!!

ಶಿವಮೊಗ್ಗ ದಸರಾ ಸಂಭ್ರಮದಲ್ಲಿ ಆನೆಗಳ ಗುದ್ದಾಟ..!!

18
0

ಸೋಮ–ಬಹದ್ದೂರ್ ಕಾಳಗಕ್ಕೆ ಗಾಂಧಿ ಬಜಾರ್‌ನಲ್ಲಿ ಆತಂಕ; ಮಂಟಪ ಸಮೇತ ದೇವಿ ವಿಗ್ರಹ ಕೆಳಕ್ಕೆ!

ಶಿವಮೊಗ್ಗ: ನಗರದ ದಸರಾ ಉತ್ಸವದ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಸಕ್ರೆಬೈಲು ಆನೆ ಬಿಡಾರದ ಸೋಮ ಮತ್ತು ಬಹದ್ದೂರ್ ಆನೆಗಳು ಗಾಂಧಿ ಬಜಾರ್ ಪ್ರದೇಶದಲ್ಲಿ ಪರಸ್ಪರ ಗುದ್ದಾಡಿಕೊಂಡ ಘಟನೆ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಸಿತು.

ದಸರಾ ಉತ್ಸವದ ಅಂಗವಾಗಿ ಚಾಮುಂಡೇಶ್ವರಿ ದೇವಿಯ ವಿಗ್ರಹವನ್ನು ಹೊತ್ತು ಸಾಗುತ್ತಿದ್ದ ಸೋಮ ಆನೆ ಹಾಗೂ ಬಹದ್ದೂರ್ ಆನೆಗಳ ನಡುವೆ ಏಕಾಏಕಿ ಗುದ್ದಾಟ ನಡೆದಿದೆ ಎಂದು ತಿಳಿದುಬಂದಿದೆ. ಈ ಸಂದರ್ಭದಲ್ಲಿ ಸೋಮ ಆನೆಯ ಮೇಲಿದ್ದ ಚಾಮುಂಡೇಶ್ವರಿ ದೇವಿಯ ವಿಗ್ರಹವು ಮಂಟಪ ಸಮೇತ ಕೆಳಕ್ಕೆ ಬಿದ್ದಿದೆ ಎನ್ನಲಾಗಿದೆ.

ಜನನಿಬಿಡ ಗಾಂಧಿ ಬಜಾರ್ ಪ್ರದೇಶದಲ್ಲಿ ನಡೆದ ಈ ಘಟನೆಯಿಂದ ಸ್ಥಳದಲ್ಲಿದ್ದ ಸಾರ್ವಜನಿಕರು ಆತಂಕಕ್ಕೊಳಗಾದರು. ದಸರಾ ಸಂಭ್ರಮದ ಮೆರವಣಿಗೆಯ ನಡುವೆ ಆನೆಗಳ ಗುದ್ದಾಟ ಸಂಭವಿಸಿದ್ದರಿಂದ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು.

ದಸರಾ ಮೆರವಣಿಗೆಯಲ್ಲಿ ಭಾಗವಹಿಸುವ ಆನೆಗಳ ನಿರ್ವಹಣೆ, ಅವುಗಳ ಸುರಕ್ಷತೆ ಹಾಗೂ ಸಾರ್ವಜನಿಕರ ರಕ್ಷಣೆಗೆ ಅಗತ್ಯ ಮುನ್ನೆಚ್ಚರಿಕೆ ವಹಿಸುವುದು ಅತ್ಯಗತ್ಯ ಎಂಬುದನ್ನು ಈ ಘಟನೆ ಮತ್ತೊಮ್ಮೆ ಮುನ್ನೆಲೆಗೆ ತಂದಿದೆ.