Home ರಾಜ್ಯ ಬಹುಮತ ಸಾಬೀತು ಮಾಡಿದ ನಟ ದಳಪತಿ, ಮುಖ್ಯಮಂತ್ರಿ ಸ್ಥಾನಕ್ಕೆ ಪ್ರಮಾಣ ವಚನದ ಸಿದ್ಧತೆ..!!

ಬಹುಮತ ಸಾಬೀತು ಮಾಡಿದ ನಟ ದಳಪತಿ, ಮುಖ್ಯಮಂತ್ರಿ ಸ್ಥಾನಕ್ಕೆ ಪ್ರಮಾಣ ವಚನದ ಸಿದ್ಧತೆ..!!

47
0

✒️..ಅಮಿತ್ ಆರ್ ಆನಂದಪುರ

ಚೆನ್ನೈ: ತಮಿಳುನಾಡು ರಾಜಕೀಯ ರಂಗದಲ್ಲಿ ಹೊಸ ಸಂಚನಗಳ ಮೂಡಿಸಿದ ನಟ ದಳಪತಿ ಮುಖ್ಯಮಂತ್ರಿ ಆಗಲು ಬಹುಮತ ಸಾಬೀತು ಮಾಡಿದ್ದಾರೆ.

ಕಳೆದ ನಾಲ್ಕು ದಿನಗಳಿಂದ ತಮಿಳುನಾಡಿನಲ್ಲಿ ಮನೆಮಾಡಿದ್ದ ರಾಜಕೀಯ ಅನಿಶ್ಚಿತತೆಗೆ ಕೊನೆಗೂ ತೆರೆ ಬಿದ್ದಿದೆ. ತಮಿಳಗ ವೆಟ್ರಿ ಕಳಗಂ (TVK) ಮುಖ್ಯಸ್ಥ ಹಾಗೂ ನಟ ವಿಜಯ್, ಮ್ಯಾಜಿಕ್ ನಂಬರ್ 118 ತಲುಪುವಲ್ಲಿ ಯಶಸ್ವಿಯಾಗಿದ್ದು, ನಾಳೆ ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.

ಇಂದು (ಮೇ.8) ಸಂಜೆ ರಾಜ್ಯಪಾಲ ಆರ್.ವಿ. ಅರ್ಲೇಕರ್ ಅವರನ್ನು ಭೇಟಿಯಾದ ವಿಜಯ್, ಅಗತ್ಯ ಶಾಸಕರ ಬೆಂಬಲ ಪತ್ರವನ್ನು ಸಲ್ಲಿಸಿದರು. ಇದರ ಬೆನ್ನಲ್ಲೇ ಚೆನ್ನೈನಲ್ಲಿರುವ ವಿಜಯ್ ನಿವಾಸದ ಎದುರು ಅಭಿಮಾನಿಗಳು ಮತ್ತು ಕಾರ್ಯಕರ್ತರು ‘ಟಿವಿಕೆ… ಟಿವಿಕೆ ‘ ಎಂದು ಘೋಷಣೆ ಕೂಗುತ್ತಾ ಸಂಭ್ರಮಾಚರಣೆ ನಡೆಸುತ್ತಿದ್ದಾರೆ.

ಕಳೆದ ತಿಂಗಳು ನಡೆದ ಚುನಾವಣೆಯಲ್ಲಿ ವಿಜಯ್ ಅವರ TVK ಪಕ್ಷವು ಒಟ್ಟು 234 ಸ್ಥಾನಗಳಲ್ಲಿ 108 ಸ್ಥಾನಗಳನ್ನು ಗೆಲ್ಲುವ ಮೂಲಕ ಡಿಎಂಕೆ ಮತ್ತು ಎಐಎಡಿಎಂಕೆಯ 62 ವರ್ಷಗಳ ಸುದೀರ್ಘ ಆಧಿಪತ್ಯಕ್ಕೆ ಬ್ರೇಕ್ ಹಾಕಿತ್ತು. ಆದರೆ, ಸರ್ಕಾರ ರಚಿಸಲು ಬೇಕಾದ 118ರ ಮ್ಯಾಜಿಕ್ ಸಂಖ್ಯೆಗೆ 10 ಸ್ಥಾನಗಳ ಕೊರತೆ ಇತ್ತು. ಬಹುಮತ ಸಾಬೀತುಪಡಿಸದ ಹೊರತು ಸರ್ಕಾರ ರಚನೆಗೆ ಆಹ್ವಾನ ನೀಡುವುದಿಲ್ಲ ಎಂದು ರಾಜ್ಯಪಾಲರು ಪಟ್ಟು ಹಿಡಿದಿದ್ದರು.

ರಾಜ್ಯಪಾಲರ ಕಟ್ಟುನಿಟ್ಟಿನ ಸೂಚನೆಯ ನಂತರ ವಿಜಯ್ ನಡೆಸಿದ ಮಿಂಚಿನ ಸಂಚಾರ ಮತ್ತು ಮಾತುಕತೆಗಳು ಕೊನೆಗೂ ಫಲ ಕೊಟ್ಟಿದೆ.

ಅದರಂತೆ ವಿಜಯ್ ಪಕ್ಷ ಚುನಾವಣೆಯಲ್ಲಿ 107 ಸ್ಥಾನಗಳನ್ನು ಪಡೆದಿದೆ. ಅಲ್ಲದೇ ಕಾಂಗ್ರೆಸ್ ನ 05, ಸಿಪಿಐ 02, ಸಿಪಿಐ(ಎಂ) 2 ಹಾಗೂ ವಿಕೆಯ 02 ಶಾಸಕರು ಬೆಂಬಲ ನೀಡಲು ಒಪ್ಪಿಗೆ ಸೂಚಿಸಿಸುವ ಮೂಲಕ ಸರ್ಕಾರ ರಚಿಸಲು ಅಗತ್ಯವಿರುವ 118 ಸ್ಥಾನಗಳ ಬೆಂಬಲ ಪಡೆದುಕೊಂಡಂತಾಗಿದೆ. ಈ ಮೂಲಕ ತಮಿಳುನಾಡು ರಾಜಕೀಯದಲ್ಲಿ ತಲೆದೋರಿದ್ದ ಬಿಕ್ಕಟ್ಟು ಕೊನೆಗೊಂಡಂತಾಗಿದೆ.

ನಾಳೆ ಪ್ರಮಾಣವಚನ: ನಾಳೆ (ಮೇ 9) ಬೆಳಗ್ಗೆ 11 ಗಂಟೆಗೆ ಚೆನ್ನೈನ ನೆಹರೂ ಕ್ರೀಡಾಂಗಣದಲ್ಲಿ ವಿಜಯ್ ಅವರು ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಲಿದ್ದು. ರಾಜ್ಯಪಾಲರು ಜೋಸೆಫ್ ವಿಜಯ್ ಅವರಿಗೆ ಪ್ರತಿಜ್ಞಾ ವಿಧಿ ಬೋಧಿಸಲಿದ್ದಾರೆ.